ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೇಕಾಗಿದ್ದಾರೆ ಎಂಬ ಪೋಸ್ಟರ್ ಹೈದರಾಬಾದ್ ನಗರದ ಗೋಡೆಗಳ ಮೇಲೆ ಕಂಡುಬಂದಿದೆ.
ಕಳೆದ ವರ್ಷ ಬಿಆರ್‌ಎಸ್ ಪಕ್ಷದ ಶಾಸಕರನ್ನು ಬಿಜೆಪಿಯೆಡೆಗೆ ಸೆಳೆಯಲು ಯತ್ನಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಸಂತೋಷ್ ಹುಡುಕಿಕೊಡುವಂತೆ ಪೋಸ್ಟರ್ ಅಂಟಿಸಲಾಗಿದ್ದು, ಹುಡುಕಿಕೊಟ್ಟವರಿಗೆ ಮೋದಿ ಭರವಸೆಯ ರೂ.15,00,000 ಬಿಡುಗಡೆ ಮಾಡಲಾಗುವುದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಬಿ.ಎಲ್ ಸಂತೋಷ್ ಅವರ ಭಾವಚಿತ್ರದೊಂದಿಗೆ `ವಾಂಟೆಡ್’, ‘ಕಾಣೆಯಾಗಿದ್ದಾರೆ’ ಹಾಗೂ ‘ಎಂಎಲ್‌ಎ ಬೇಟೆಗಾರ’ ಎಂಬ ಬರಹಗಳಿರುವ ಪೋಸ್ಟರ್‌ಗಳ ಹೈದರಾಬಾದ್ ನಗರದಲ್ಲಿ ರಾರಾಜಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಪಕ್ಷದ ಕೈವಾಡ ಎಂದು ಆರೋಪಿಸಿದೆ.
ಪ್ರಸ್ತುತ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಶಾಸಕರ ಖರೀದಿ ಪ್ರಕರಣದಲ್ಲಿ ಸಂತೋಷ್‌ರನ್ನು ಆರೋಪಿ ಎಂದು ಹೆಸರಿಸಲು ಪೊಲೀಸ್ ಕೋರಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವರ್ಗಾವಣೆ ಮಾಡಿತ್ತು.