ವಿಧಾನ ಪರಿಷತ್ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದಿಂದ ಪರಿಷತ್ ಸದಸ್ಯ ಸ್ಥಾನ ಪಡೆದಿದ್ದ ಬಾಬುರಾವ್ ಸೋಮವಾರ ಅಂದ್ರೆ ಇಂದು ಸಂಜೆ ರಾಜಿನಾಮೆ ನೀಡಿದ್ದಾರೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ರಾಜಿನಾಮೆ ಸಲ್ಲಿಸಿದ್ದು ಅಂಗೀಕಾರವೂ ಆಗಿದೆ.
ಹಿಂದೆ ಕಾಂಗ್ರೆನಲ್ಲಿದ್ದ ಬಾಬುರಾವ್ ಬಿಜೆಪಿ ಸೇರ್ಪಡೆಗೊಂಡಿದ್ರು. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿರುವ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಆದ್ರೆ ಕೆಲ ದಿನಗಳ ಹಿಂದೆ ಈ ವಿಚಾರವನ್ನು ತಳ್ಳಿಹಾಕಿದ್ದ ಅವರು ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸೋದೇ ನನ್ನ ಗುರಿ ಎಂದು ಹೇಳಿಕೆ ನೀಡಿದ್ರು. ಇದೀಗ ಬಿಜೆಪಿ ತೊರೆದಿರುವ ಅವರು ಯಾವ ಪಕ್ಷ ಸೇರ್ತಾರೆ ಅನ್ನೋ ಕುತೂಹಲವಿದೆ