ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ರಾಜೀನಾಮೆ ನೀಡುತ್ತಿದ್ದೇನೆ. ಕೆ.ಎಸ್ ಈಶ್ವರಪ್ಪ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ. ಈಶ್ವರಪ್ಪ ಸವಾಲನ್ನು ಸ್ವೀಕಾರ ಮಾಡುತ್ತೇನೆ. ಈಶ್ವರಪ್ಪ ಸಮರ್ಥರಿದ್ದರೇ ನನ್ನನ್ನ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕುವರೆ ಕೋಟಿ ಮೌಲ್ಯದ ಸೀರೆಗಳು ಸಿಕ್ಕಿವೆ. ಆ ಸೀರೆಗಳ ಮಾಲೀಕರು ಯಾರು ಎಂದು ಗೊತ್ತಾಗಿಲ್ಲ. ಈಶ್ವರಪ್ಪ ಅವರಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ಪ್ರಚೋದನೆ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದ್ಪ್ದಾರೆ. ಪ್ರಚೋದನೆಯೇ ಬಂಡವಾಳವಾಗಿದೆ ಎಂದು ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಅಲ್ಲದೇ, ಸುದ್ದಿಗೋಷ್ಟಿಯಲ್ಲಿ ನನ್ನ ಬಗ್ಗೆ ಏಕವಚನದಲ್ಲೇ ಮಾತನಾಡಿದ್ದಾರೆ. ಅವರ ಮಾತು ನನಗೆ ಇಷ್ಟವಾಗಿಲ್ಲವೆಂದು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು
ರಾಜಿನಾಮೆ ನಂತರ ಮಾತನಾಡಿದ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಬಗ್ತಗೆ ಪ್ಯಾರತಿಕ್ರಿರಿಯೆ ನೀಡಲಿಲ್ಲವಾದರೂ ತಾವು ಶಿವಮೊಗ್ಗದಿಂದಲೇ ಕಣಕ್ಕಿಳಿಯೋದಾಗಿ ಹೇಳಿದ್ರು