ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ನಲ್ಲಿ ಮರ್ಯಾದಾ ಪುರುಷೋತ್ತಮನಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ಬಿಜೆಪಿ ಶಾಸಕರೇ ಶ್ರೀರಾಮನ ಮೂರ್ತಿಗೆ ಅಗೌರವ ತೋರಿದ್ದಾರೆ ಎನ್ನದೆ.
ರಾಮನ ತೊಡೆ ಮೇಲೆ ನಿಂತ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶಾಸಕರ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತವಾಗಿದೆ.
ರಾಮನವಮಿಯಂದೇ ಬಿಜೆಪಿ ಶಾಸಕರಿಂದ ಎಡವಟ್ಟಾಗಿದ್ದು, ರಾಮನ ಪ್ರತಿಮೆ ತೊಡೆ ಮೇಲೆ ನಿಂತು ಮೂರ್ತಿ ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾ ಯಾತ್ರೆ ವೇಳೆ ಘಟನೆ ನಡೆದಿದೆ.
ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ಫೇಸ್‌ಬುಕ್‌ನಲ್ಲಿ ಪೊಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.