ಬೆಂಗಳೂರು : ಕೈವಾರ ತಾತಯ್ಯ ಅವರ 299ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ಶಾಸಕ ಪ್ರದೀಪ್ ಈಶ್ವರ್, ಕೆಲ ಸಭಿಕರನ್ನು ಉದ್ದೇಶಿಸಿ ಸಿಟ್ಟಿನ ಭರದಲ್ಲಿ ಇದು ನಿಮ್ಮಪ್ಪನ ಕಾರ್ಯಕ್ರಮವಲ್ಲ ದಿ ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ ಎಂದಿದ್ದರು.
ಈ ಕುರಿತು ಬಿಜೆಪಿಯ ಸಂಸದ ಪಿಸಿ ಮೋಹನ್ ಅವರು ಮತ್ತು ಬಿಜೆಪಿ ಐಟಿ ಸೆಲ್ ಈಶ್ವರ್ ವಿರುದ್ಧ ಇಂದು ವಾಗ್ದಾಳಿ ನಡೆಸಿದೆ. ಪ್ರದೀಪ್ ಈಶ್ವರ್ ಮೊದಲ ಸಲ ಶಾಸಕರಾಗಿದ್ದಾರೆ. ಈಗ ಬಲಿಜ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ್ದೇವೆ. ಅದಕ್ಕೆ ಬರಬೇಕಿರುವ ರೂ.300 ಕೋಟಿ ಅನುದಾನವನ್ನು ತರಲಿ, ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಹೇಳಿಕೆ ಅವರ ಸಂಸ್ಕಾರ ತೋರಿಸುತ್ತದೆ. ದೊಡ್ಡದಾಗಿ ಮಾತಾಡುವ ಪ್ರದೀಪ್ ಈಶ್ವರ್ ಬಲಿಜ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇತ್ತ ಬಿಜೆಪಿ ಐಟಿ ಸೆಲ್, ಟ್ವೀಟ್ ಮಾಡಿ ಈಶ್ವರ್ ಆಕ್ಸಿಡೆಂಟಲ್ MLA, ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ ಎಂದು ತಿವಿದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಈಶ್ವರ್, ಬಿಜೆಪಿಯ ಐಟಿ ಸೆಲ್ನವರು ಅಯೋಗ್ಯರು. ನಾನು ಆಕ್ಸಿಡೆಂಟಲ್ ಎಂಎಲ್ಎ ಅಂತಾ ಮಾತಾಡಲಿ ಬಿಡಿ. ಬಿಜೆಪಿ ಐಟಿ ಟೀಂಗೆ ಮಾಡಲು ಕೆಲ್ಸಾ ಇಲ್ಲ. ನಿರುದ್ಯೋಗಿಗಳಾಗಿದ್ದಾರೆ. ಕನಿಷ್ಠ ವೀವ್ಸ್, ಲೈಕ್ಸ್ ನನ್ನ ಬಗ್ಗೆ ಹಾಕುವುದರಿಂದ ಸಿಗುತ್ತೆ ಅಂದರೆ ಸಿಗಲಿಬಿಡಿ. ಆ ಕಾರ್ಯಕ್ರಮದಲ್ಲಿ ಏನು ನಡೆಯಿತು ಎಂದು ಅರಿವಷ್ಟು ಕಾಮನ್ ಸೆನ್ಸ್ ಅವರಿಗಿಲ್ಲ ಎಂದು ಟಾಂಗ್ ನೀಡಿದ್ದಾರೆ.