ಚೆಕ್‍ಬೌನ್ಸ್ ಪ್ರಕರಣವೊಂದರಲ್ಲಿ ಜನಪ್ರತಿನನಿಧಿಗಳ ನ್ಯಾಯಾಲಯವು ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಹೀಗಾಗಿ ಶಾಸಕ ಎಂಪಿ ಕುಮಾರಸ್ವಾಮಿ ಬಂಧನಭೀತಿ ಎದುರಿಸುವಂತಾಗಿದೆ.
ದೂರುದಾರರಾದ ಹೂವಪ್ಪ ಶಾಸಕರಿಗೆ ನೀಡಿದ್ದ ಸಾಲದ ಮರುಪಾವತಿಗಾಗಿ ಎಂಟು ಚೆಕ್ ನೀಡಲಾಗಿತ್ತು. ಆದರೆ ಎಂಟೂ ಚೆಕ್ ಬೌನ್ಸ್ ಆಗಿತ್ತು. ಈ ಹಣ ಮರುಪಾವತಿಗಾಗಿ ಹೂವಪ್ಪ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಎಂ.ಪಿ.ಕುಮಾರಸ್ವಾಮಿಯವರಿಗೆ ಆರು ತಿಂಗಳ ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರುವುದೇ ಶಾಸಕರ ಪಾಲಿಗೆ ಮುಳುವಾಗಿದೆ
ಕುಮಾರಸ್ವಾಮಿ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸುವಂತೆ ಚಿಕ್ಕಮಗಳೂರು ಎಸ್ಪಿಗೆ ನ್ಯಾಯಾಲಯ ಸೂಚನೆ ನೀಡಿದೆ.