Wednesday, November 13, 2024
Homeಟಾಪ್ ನ್ಯೂಸ್ಕಲಾಪದ ವೇಳೆ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕ

ಕಲಾಪದ ವೇಳೆ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕ

ಅಗರ್ತಲಾ: ಜನತೆಯ ಆಶೀರ್ವಾದ ಪಡೆದು ವಿಧಾನ ಸಭೆ ಪ್ರವೇಶಿಸಿ ಜನರಿಗೆ ಬೇಕಾದ ಕೆಲಸ ಮಾಡಬೇಕಾದ ಜನನಾಯಕರು ಸದನದ ಕಲಾಪದ ವೇಳೆ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿಬಿದ್ದಿದ್ದಾರೆ,

ತ್ರಿಪುರಾದ ಬಗ್ಬಸ್ಸಾ ಕ್ಷೇತ್ರದ ಬಿಜೆಪಿ ಶಾಸಕ ಜಾದವ್‌ಲಾಲ್ ನಾಥ್ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ನೋಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಧಾನಸಭಾ ಅಧಿವೇಶನದ ವೇಳೆ ಕರ್ನಾಟಕದ ಕೆಲವು ಬಿಜೆಪಿ ಶಾಸಕರು ಅಶ್ಲೀಲ ವೀಡಿಯೋ ನೋಡಿ ಇಡೀ ದೇಶದಲ್ಲಿ ಬಿಜೆಪಿ ಶಾಸಕರ ಮಾನ ಹರಾಜಾದ ರೀತಿಯಲ್ಲೇ ತ್ರಿಪುರಾದ ಬಿಜೆಪಿ ಶಾಸಕ ಜಾದವ್ ಲಾಲ್ ನಾಥ್ ಕೂಡಾ ಜನನಾಯಕರು ತಲೆ ಎತ್ತಿ ತಿರುಗಾಡದಂಥ ಕೆಲಸ ಮಾಡಿದ್ದಾರೆ. ಶಾಸಕರ ಈ ನಡವಳಿಕೆಗೆ ದೇಶಾದ್ಯಂತ ಜನ ಸಾಮಾಜಿಕ ಜಾಲತಾಣದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!