ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಸೀರೆ ಹಂಚಿರುವ ಆರೋಪ ಸಚಿವ ಮುನಿರತ್ನ ವಿರುದ್ಧ ಕೇಳಿ ಬಂದಿದೆ. ರಾಜರಾಜೇಶ್ವರಿನಗರ ವಾರ್ಡ್‌ನ ಬಂಗಾರಪ್ಪನಗರದಲ್ಲಿ ಸಚಿವ ಮುನಿರತ್ನ ಬೆಂಬಲಿಗರು ಮತದಾರರಿಗೆ ಸೀರೆ ಹಂಚುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಚುನಾವಣಾ ಆಯೋಗದ ಅಧಿಕಾರಿ ಮನೋಜ್ ಕುಮಾರ್ ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಆರ್‌ಆರ್ ನಗರದಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸೀರೆ ಹಂಚುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರು ಪರಾರಿಯಾಗಿದ್ದರು.
ಕ್ರೈಸ್ತ ಸಮುದಾಯವನ್ನು ಹೊಡೆದು ಓಡಿಸಿ ಎಂದು ಸಚಿವ ಮುನಿರತ್ನ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ, ಇತ್ತೀಚೆಗೆಷ್ಟೇ ಆರ್‌ಆರ್ ನಗರ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಸೀರೆ ಹಂಚಿಕೆ ವಿಷಯಕ್ಕೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಸೀರೆ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಮುಖಂಡ ವಿ.ಸಿ ಚಂದ್ರು ಎರಡನೇ ಆರೋಪಿಯಾಗಿದ್ದಾರೆ. ಸಚಿವ ಮುನಿರತ್ನ ವಿರುದ್ಧ ದಾಖಲಾದ ಮೂರನೇ ಎಫ್‌ಐಆರ್ ಇದಾಗಿದೆ.ಅ ಈಗಾಗಲೇ ಹಲವಾರು ದಾಳಿ ನಡೆಸಿ ಎಲ್ಲ ಸೀರೆಗಳನ್ನು ರಾಜರಾಜೇಶ್ವರಿನಗರ ಪೋಲಿಸ್ ಠಾಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.