ಚಾಮರಾಜನಗರ: ರಾಜ್ಯದೆಲ್ಲೆಡೆ ಚುನಾವಣಾ ಪ್ರಚಾರದ ಅಬ್ಬರ ಮೆಲ್ಲಗೆ ಹೆಚ್ಚಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶದ ವೇಳೆ ಸೌತ್ ಸಿಂಗ್ ಎನಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಬ್ಬರದ ಭಾಷಣ ಮಾಡಿದ್ರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ದೇಶದಲ್ಲಿ ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿ ಪಕ್ಷಕಷ್ಟೇ, ಕಾಂಗ್ರೆಸ್‌ಗಲ್ಲ ಎಂದಿದ್ದಾರೆ.
ಕಾಂಗ್ರೆಸ್ ಒಂದು ಪರಿವಾರದ ಪಕ್ಷ. ನಮ್ಮದು ಜನರ ಪಕ್ಷ. ಇದೇ ನೋಡಿ ನಮಗೂ ಅವರಿಗೂ ಇರುವ ವ್ಯತ್ಯಾಸ. ಕರ್ನಾಟಕ ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷ್ಟೇ ಇಲ್ಲಿನ ನಾಯಕರಿದ್ದಾರೆ. ಅವರು ಒಂದೊಂದು ಸಾರಿ ಅಧಿಕಾರಕ್ಕೆ ಬಂದಾಗಲೂ ಗಾಂಧಿ ಕುಟುಂಬವನ್ನು ಹೇಗೆ ಖುಷಿಪಡಿಸಬೇಕೆಂದು ಯೋಚನೆ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಕೆಲಸ ಮಾಡುತ್ತೇವೆ, ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ, 70 ವರ್ಷದಲ್ಲಿ 60 ವರ್ಷ ಆಡಲು ಆಡಳಿತ ನಡೆಸಿದ್ದಾರೆ, ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ನಿನ್ನೆ ಮೊನ್ನೆ ರಾಜ್ಯಕ್ಕೆ ಬಂದವರಲ್ಲ, ಅಧಿಕಾರ ಅನುಭವಿಸಿದ್ದಾರೆ..? ಏನು ಮಾಡಿದ್ದಾರೆ ಎಂದು ಹೇಳಲಿ. ಅವರು ಮೈಕ್ ಬಳಸುವುದು ಕೇವಲ ಬಿಜೆಪಿ ವಿರುದ್ಧ ಟೀಕೆ ಮಾಡಲೇ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡಲು ಅಲ್ಲ ಎಂದು ಕಿಡಿಕಾರಿದರು.