ನವದೆಹಲಿ: ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಭಾರೀ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸುತ್ತಲೇ ಬಂದಿರುವ ಬಿಜೆಪಿ ಈಗ ಈ ಕುರಿತ ವಿಡಿಯೋ ಸರಣಿ ‘ಕಾಂಗ್ರೆಸ್ ಫೈಲ್ಸ್‘ನ ಮೊದಲ ಎಪಿಸೋಡ್ ಬಿಡುಗಡೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿರುವ 3 ನಿಮಿಷಗಳ ವಿಡಿಯೋದಲ್ಲಿ ಮನಮೋಹನ್ ಸಿಂಗ್ ಸರಕಾರದ ಆಡಳಿತಾವಧಿಯಲ್ಲಿ 48,20,69,00,00,000 ರೂಪಾಯಿ ಮೊತ್ತದ ಭಾರೀ ಭ್ರಷ್ಟಾಚಾರ ನಡೆದಿದೆ ಎಂದಿದೆ.
ಕಾಂಗ್ರೆಸ್ ಅವಧಿಯಲ್ಲಿ 2ಜಿ, ಗಣಿ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ ಸೇರಿ ಹಲವು ಭ್ರಷ್ಟಾಚಾರದ ಪ್ರಕರಣಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ.
ಈ 48 ಟ್ರಿಲಿಯನ್ 20 ಬಿಲಿಯನ್ ಹಣದಲ್ಲಿ 24 ಐಎನ್ ಎಸ್ ವಿಕ್ರಾಂತ್, 300 ರಫೇಲ್ ಜೆಟ್ ಗಳನ್ನು ಖರೀದಿಸಬಹುದಿತ್ತು. 1000 ಮಂಗಳ್ ಮಿಶನ್ ಯಾನ ಕೈಗೊಳ್ಳಬಹುದಿತ್ತು. ಆದರೆ ಕಾಂಗ್ರೆಸ್ ಭ್ರಷ್ಟಾಚಾರದ ಹಣವನ್ನು ದೇಶದ ಜನತೆ ಭರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.