ದಾವಣಗೆರೆ: ಎಲ್ಲೆಲ್ಲೂ ಮೋದಿ..ಮೋದಿ.. ಎಂಬ ಉದ್ಗಾರ.ರಸ್ತೆಯುದ್ದಕ್ಕೂ ಹೂ ಮಳೆ. ಮೋದಿಗೆ ಜೈಕಾರ ಹಾಕುತ್ತಾ ಸಾಲುಗಟ್ಟಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು. ಇದು ಬೆಣ್ಣೆನಗರಿ ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಭರ್ಜರಿ ಸ್ವಾಗತ
ದಾವಣಗೆರೆಯಲ್ಲಿ ನಡೆಯುತ್ತಿರುವ ವಿಜಯಸಂಕಲ್ಪ ಮಹಾಸಂಗಮ ಕಾರ್ಯಕ್ರಮಕ್ಕಾಗಿ ಆಗಮಿಸಿದ ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಒಟ್ಟುಮಾಡಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ದಾವಣಗೆರೆ ಹೆಲಿಪ್ಯಾಡ್‌ಗೆ ಸೇನಾ ಕಾಪ್ಟರ್‌ನಲ್ಲಿ ಆಗಮಿಸಿದ ಮೋದಿ ತೆರೆದ ವಾಹನದಲ್ಲಿ ದಾವಣಗೆರೆಯ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ್ರು. ಮೋದಿ ನೋಡಲು ಬಂದಿದ್ದ ಲಕ್ಷಾಂತರ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗುತ್ತಾ ನೆಚ್ಚಿನ ನಾಯಕನ್ನು ಬರಮಾಡಿಕೊಂಡ್ರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮೋದಿ ಜೊತೆಗಿದ್ರು.