Monday, January 20, 2025
Homeಟಾಪ್ ನ್ಯೂಸ್ಬಿಜೆಪಿ ಜಾಗತಿಕ ಪ್ರಮುಖ ರಾಜಕೀಯ ಪಕ್ಷ: ವಾಲ್ ಸ್ಟ್ರೀಟ್ ಜರ್ನಲ್

ಬಿಜೆಪಿ ಜಾಗತಿಕ ಪ್ರಮುಖ ರಾಜಕೀಯ ಪಕ್ಷ: ವಾಲ್ ಸ್ಟ್ರೀಟ್ ಜರ್ನಲ್

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕನವೊಂದು ಬಿಜೆಪಿಯನ್ನು ವಿಶ್ವದ ಅತ್ಯಂತ ಪ್ರಮುಖ ಪಕ್ಷ ಎಂದು ಬಣ್ಣಿಸಿದೆ. ಸೋಮವಾರ ಅದರಲ್ಲಿ ಪ್ರಕಟವಾದ ವಾಲ್ಟರ್ ರಸೆಲ್ ಮೀಡ್ ಅವರ ಲೇಖನದಲ್ಲಿ, ಬಿಜೆಪಿ ವಿಶ್ವದ ಪ್ರಮುಖ ವಿದೇಶಿ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದೆ.

 2014 ಮತ್ತು 2019ರಲ್ಲಿ ಸತತ ಗೆಲುವಿನ ನಂತರ ಬಿಜೆಪಿ 2024ರಲ್ಲಿ ಮತ್ತೆ ಗೆಲುವಿನತ್ತ ಸಾಗುತ್ತಿದೆ. ಭಾರತವು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಅಂಕಣವು ಹೇಳಿದೆ.

ಭಾರತವಿಲ್ಲದೆ ಚೀನಾವನ್ನು ತಡೆಯಲು ಅಮೆರಿಕಗೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಅಂಕಣಗಾರರು, ಭಾರತದ ಸಹಾಯವಿಲ್ಲದೆ, ಚೀನಾದ ಏರುತ್ತಿರುವ ಶಕ್ತಿಯನ್ನು ನಿಯಂತ್ರಿಸುವ ಅಮೆರಿಕದ ಪ್ರಯತ್ನಗಳು ವಿಫಲಗೊಳ್ಳುತ್ತವೆ ಎಂದು ಅಭಿಪ್ರಾಯಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಬಿಜೆಪಿ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಶೀಘ್ರವಾಗಿ ಸ್ಥಾಪಿಸಲಿದೆ. ಬಿಜೆಪಿಯ ಚುನಾವಣಾ ಕಾರ್ಯತಂತ್ರದಲ್ಲಿ ಹಿಂದೂ ಅಜೆಂಡಾ ಸ್ಪಷ್ಟವಾಗಿ ಗೋಚರಿಸುತ್ತದೆ. ಮುಸ್ಲಿಂ ಬ್ರದರ್‌ಹುಡ್‌ನಂತೆ ಬಿಜೆಪಿಯು ಪಾಶ್ಚಿಮಾತ್ಯ ಉದಾರವಾದದ ಹಲವು ವಿಚಾರಗಳು ಮತ್ತು ಆದ್ಯತೆಗಳನ್ನು ತಿರಸ್ಕರಿಸುತ್ತದೆ, ಚೀನಾದ ಕಮ್ಯುನಿಸ್ಟ್‌ ಪಕ್ಷದ ಹಾಗೆ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಬಯಸುತ್ತದೆ  ಎಂದು ಲೇಖನ ಹೇಳಿದೆ.

 ಆಡಳಿತಾರೂಢ ಪಕ್ಷವನ್ನು ಟೀಕಿಸುವ ಪತ್ರಕರ್ತರು ಕಿರುಕುಳ ಮತ್ತು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಕ್ತಿಯ ಬಗ್ಗೆ ಅನೇಕ ಜನರು ಭಯಪಡುತ್ತಾರೆ. RSS ರಾಷ್ಟ್ರವ್ಯಾಪಿ ಇರುವ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾಗಿದ್ದು, ಬಿಜೆಪಿ ನಾಯಕತ್ವದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಲೇಖಕ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!