Thursday, July 16, 2026
Homeಟಾಪ್ ನ್ಯೂಸ್ಎಲ್ಲದಕ್ಕೂ ಸರ್ವೇ ಹಿಂದೆ ಬಿದ್ದ ಬಿಜೆಪಿ: ಇನ್ನು ಮುಗಿದಿಲ್ಲ ಟಿಕೆಟ್ ಗೊಂದಲ

ಎಲ್ಲದಕ್ಕೂ ಸರ್ವೇ ಹಿಂದೆ ಬಿದ್ದ ಬಿಜೆಪಿ: ಇನ್ನು ಮುಗಿದಿಲ್ಲ ಟಿಕೆಟ್ ಗೊಂದಲ

ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಆಗಲೇ ಅಭ್ಯರ್ಥಿ ಘೋಷಿಸಿ ಕೆಲ ಅಭ್ಯರ್ಥಿಗಳು ಪ್ರಚಾರಕಾರ್ಯವನ್ನೂ ಪ್ರಾರಂಭಿಸಿದ್ದಾಯ್ತು. ಆದ್ರೆ ಬಿಜೆಪಿ ಮಾತ್ರ ಇನ್ನೂ ಟಿಕೆಟ್‌ ಯಾರಿಗೆ ಕೊಡಬೇಕು ಅನ್ನೋ ಗೊಂದಲದಿಂದಲೇ ಹೊರಬಂದಿಲ್ಲ.

ಸೋಮವಾರ ಸಂಜೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡೋದಾಗಿ ಹೇಳಿದ್ದ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರ ಜೊತೆ ಸುದೀರ್ಘ ಸಭೆಗಳನ್ನು ನಡೆಸಿತ್ತು. ಆದ್ರೆ ಕೆಲದ ಕ್ಷೇತ್ರಗಳಲ್ಲಿ ಇನ್ನೂ ಗೊಂದಲ ಇದೆ.. ಆ ಕ್ಷೇತ್ರಗಳಲ್ಲಿ ಮರುಸರ್ವೆ ಮಾಡಿಸಿ ಅಭ್ಯರ್ಥಿ ಗೋಷಣೆ ಮಾಡಲಾಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.

ಇದೀಗ ವಲಸೆ ಬಂದ ನಾಯಕರ ಕ್ಷೇತ್ರದಲ್ಲೂ ಸರ್ವೇ ಮಾಡೋದಾಗಿ ಬಿಜೆಪಿ ಹೇಳಿದೆ. ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡು ಸವಿಚ ಸ್ತಾನ ಗಿಟ್ಟಿಸಿದ್ದ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಮೂಲ ಕಾರ್ಯಕರ್ತರು ಬಂಡಾಯವೆದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಬಹುದೆಂಬ ಆತಂಕವಿದ್ದು, ವಲಸಿಗ ಅಭ್ಯರ್ಥಿಗಳ ಕ್ಷೇತ್ರದಲ್ಲೂ ಈಗ ಬಿಜೆಪಿ ಸರ್ವೆ ಕಾರ್ಯಕ್ಕೆ ಮುಂದಾಗಿದೆ

ಹೆಚ್ಚಿನ ಸುದ್ದಿ

Change Language »
error: Content is protected !!