ಬೆಂಗಳೂರು : ಮಾಜಿ ಸಚಿವ ರೇಣುಕಾಚಾರ್ಯ ಶುಕ್ರವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಹಾಗೂ ಬಿಜೆಪಿ ಭಿನ್ನಮತ ವಿವಾದಗಳು ಎದುರಿಗಿರುವಂತೆಯೇ ನಡೆದಿರುವ ಈ ಭೇಟಿ ರಾಜಕೀಯವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಪರವಾಗಿ ರೇಣುಕಾಚಾರ್ಯ ಸಮವೇಶ ನಡೆಸಲು ಮುಂದಾಗಿದ್ದರು. ಆದರೆ ಈ ಸಮಾವೇಶಕ್ಕೆ ಯಡಿಯೂರಪ್ಪ ಬಣದಿಂದ ಸಮ್ಮತಿ ದೊರೆತಿರಲಿಲ್ಲ. ಆದರೂ ಸಹ ಯಡಿಯೂರಪ್ಪ ಬಣಕ್ಕೆ ಸೆಡೆಡು ಹೊಡೆದಿರುವ ರೇಣುಕಾಚಾರ್ಯ ದಾವಣಗೆರೆಯಲ್ಲಿ ಲಿಂಗಾಯತ ಸಮುದಾಯವನ್ನು ಸೇರಿಸಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಸಮಾವೇಶ ಮಾಡಿಯೆ ಮಾಡುತ್ತೇನೆಂದು ಹೇಳಿದ್ದಾರೆ. ಈ ಹೇಳಿಕೆ ವಿಜಯೇಂದ್ರ ಮತ್ತಿರರಲ್ಲಿ ಅಸಮಧಾನ ಮೂಡಿಸಿದೆ.
ಕಳೆದೆರೆಡು ದಿನಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಸೌಮ್ಯವಾದ ಹೇಳಿಕೆಗಳನ್ನು ನೀಡಲು ಶುರುಮಾಡಿರುವ ರೇಣುಕಾಚಾರ್ಯ ಇಂದು ಧಿಡೀರನೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.