Saturday, January 25, 2025
Homeರಾಜಕೀಯಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್ – ಸಿಎಂ ಬೊಮ್ಮಾಯಿ, ಬಿಎಸ್‍ವೈ ದೆಹಲಿಗೆ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್ – ಸಿಎಂ ಬೊಮ್ಮಾಯಿ, ಬಿಎಸ್‍ವೈ ದೆಹಲಿಗೆ

ಬೆಂಗಳೂರು: ವಿಧಾನಸಭಾ ಚುನಾವಣಾ ಉಮೇದುವಾರಿಕೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದವಾಗಿದ್ದು, ವರಿಷ್ಠರ ಸಮ್ಮತಿಗಾಗಿ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಎರಡು ದಿನ ದೆಹಲಿಯಲ್ಲೇ ಮೊಕ್ಕಾಂ ಹೂಡಲಿರುವ ರಾಜ್ಯ ಬಿಜೆಪಿ ನಾಯಕರ ಬಳಗ ಹೈಕಮಾಂಡ್‍ನೊಂದಿಗೆ ಚರ್ಚೆ ನಡೆಸಲಿದೆ. ಜೆಡಿಎಸ್-ಕಾಂಗ್ರೆಸ್ ಇದುವರೆಗೂ ತಮ್ಮ ಬಹುತೇಕ ಸ್ಪರ್ಧಾಳುಗಳನ್ನು ಘೋಷಿಸಿದ್ದರೂ ಬಿಜೆಪಿಯಿಂದ ಯಾವುದೇ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಿಲ್ಲ.
ವರಿಷ್ಠರ ಮುಂದಿಡಲು ಬಿಜೆಪಿ ಕೊಂಡೊಯ್ಯುತ್ತಿರುವ ಪಟ್ಟಿಯನ್ನು ಪ್ರತಿ ಕ್ಷೇತ್ರದ ಜನಾಭಿಪ್ರಾಯ ಪಡೆದು ಸಿದ್ದಪಡಿಸಲಾಗಿದೆ. ಪ್ರತಿ ಕ್ಷೇತ್ರಕ್ಕೂ ಮೂರು ಆಯ್ಕೆಗಳಿದ್ದು, ಬಹುತೇಕ ರಾಜ್ಯನಾಯಕರ ಮನ್ನಣೆಯಂತೆ ಮೊದಲನೇ ಆಯ್ಕೆಗೇ ಟಿಕೆಟ್ ಸಿಗುವ ಸಂಭವಗಳು ಹೆಚ್ಚಾಗಿವೆ. ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆ ಮತ್ತು ಬ್ಯಾಲೆಟ್ ರಿಪೋರ್ಟ್ ಕೂಡ ಅಭ್ಯರ್ಥಿಗಳ ಆಯ್ಕೆಯ ಮೇಲೆ ಪರಿಣಾಮ ಬೀರಲಿವೆ. ಕೆಲವೇ ಕೆಲವು ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಬಹುತೇಕ ಹಾಲಿ ಶಾಸಕರಿಗೆ ಈ ಬಾರಿಯೂ ಟಿಕೆಟ್ ಸಿಗುವುದು ಖಚಿತವಾಗಿದೆ.
ಸಹಜವಾಗಿಯೇ ಬಿಜೆಪಿ ಪಟ್ಟಿ ಮೂರೂ ಪಕ್ಷಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಪಕ್ಷಾಂತರ ಪರ್ವಕ್ಕೂ ಸಹ ನಾಂದಿಯಾಗಬಹುದಾದ ಸಾಧ್ಯತೆ ಎದುರಾಗಿವೆ. ಏ 9-10 ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ ಬಳಿಕ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಹೆಚ್ಚಿನ ಸುದ್ದಿ

error: Content is protected !!