Monday, November 4, 2024
Homeಟಾಪ್ ನ್ಯೂಸ್BJP VS CONGRESS: ಮರಳಿಬಾರದೂರಿಗೆ ʼಶಕ್ತಿʼಯ ಪಯಣ : ಕಾಂಗ್ರೆಸ್ ಕಾಲೆಳೆದ ಮೈತ್ರಿಪಕ್ಷ

BJP VS CONGRESS: ಮರಳಿಬಾರದೂರಿಗೆ ʼಶಕ್ತಿʼಯ ಪಯಣ : ಕಾಂಗ್ರೆಸ್ ಕಾಲೆಳೆದ ಮೈತ್ರಿಪಕ್ಷ

ಬೆಂಗಳೂರು: ಮರಳಿಬಾರದೂರಿಗೆ ʼಶಕ್ತಿʼಯು ಪಯಣ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಟೀಕಿಸಿದೆ.

ಇತ್ತೀಚೆಗೆ ಡಿಕೆ ಶಿವಕುಮಾರ್‌ ಮಾತನಾಡಿ, ಶಕ್ತಿ ಯೋಜನೆಯನ್ನು ನಿಲ್ಲಿಸುವ ಸುಳಿವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಎಕ್ಸ್‌ನಲ್ಲಿ ಟೀಕಿಸಿದೆ.

ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
ರಾಜ್ಯದ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿರುವುದು ಖಚಿತ!! ಗ್ಯಾರಂಟಿಗಳು ಬೋಗಸ್‌ ಎಂಬುದು ಖಂಡಿತ!! ಎಂದಿದೆ.

ಜೆಡಿಎಸ್‌ ಟ್ವೀಟ್‌ನಲ್ಲಿ ಏನಿದೆ?
ಅಂದು ಜಾಲಿ ಜಾಲಿ, ಇಂದು ಖಾಲಿ ಖಾಲಿ.. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್‌ ಅಂಗಡಿ ಖಾಲಿಯಾಗಿದೆ. ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರ ಹಿಡಿದು, ನಾಡಿನ ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆ ನಿಲ್ಲಿಸಲು ಯತ್ನಿಸುತ್ತಿದೆ.

ಮಹಿಳೆಯರಿಗೆ ನೀಡುತ್ತಿರುವ ಉಚಿತ ಬಸ್‌ ಪ್ರಯಾಣವಾದ ಶಕ್ತಿ ಯೋಜನೆಯನ್ನು ಮರುಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್‌ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಹಲವು ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಎಲ್ಲರಿಗೂ ಗೊತ್ತು. ಈಗ ಶಕ್ತಿ ಯೋಜನೆ ಬಗ್ಗೆ ಸ್ವತಃ ಡಿಸಿಎಂ ಚಕಾರ ಎತ್ತಿರುವುದು ಸರ್ಕಾರದ ಬೊಕ್ಕಸ ಬರಿದಾಗಿರುವುದಕ್ಕೆ ಪುಷ್ಠಿ ನೀಡಿದೆ ಎಂದು ಕಿಡಿಕಾರಿದೆ.

ಹೆಚ್ಚಿನ ಸುದ್ದಿ

error: Content is protected !!