Thursday, March 12, 2026
Homeಟಾಪ್ ನ್ಯೂಸ್GBA ELECTION: ಎಲೆಕ್ಷನ್​​​​ ಘೋಷಣೆಗೂ ಮುನ್ನ ಚುನಾವಣಾ ಅಖಾಡಕ್ಕೆ ಧುಮುಕಿದ ಬಿಜೆಪಿ

GBA ELECTION: ಎಲೆಕ್ಷನ್​​​​ ಘೋಷಣೆಗೂ ಮುನ್ನ ಚುನಾವಣಾ ಅಖಾಡಕ್ಕೆ ಧುಮುಕಿದ ಬಿಜೆಪಿ

ಬೆಂಗಳೂರು: ಜಿಬಿಎ (GBA) ಚುನಾವಣೆ (Election) ಸದ್ಯದಲ್ಲೇ ಘೋಷಣೆ ಹಿನ್ನೆಲೆ, ನಿನ್ನೆ (ಫೆ.7) ಜಿಬಿಎ ಚುನಾವಣೆಗೆ ಬಿಜೆಪಿಯ ಉಸ್ತುವಾರಿ ರಾಮ್ ಮಾಧವ್ (Ram madhav) ಪ್ರಮುಖರ ಸಭೆ ನಡೆಸಿದ್ದಾರೆ. ಈ ಸಭೆಯ ಬಳಿಕ ಇಂದಿನಿಂದಲೇ (ಫೆ.8) ರಾಮ್ ಮಾಧವ್ ಅಖಾಡಕ್ಕೆ ಧುಮುಕಿದ್ದು ಆಕ್ಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಮ್ ಮಾಧವ್ ರೌಂಡ್ಸ್ ಹೋಗಿದ್ದಾರೆ.ಇಡೀ 5 ಮಹಾನಗರ ಪಾಲಿಕೆಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಕ್ಷೇತ್ರ ಅತ್ಯಂತ ಹೆಚ್ಚು ವಾರ್ಡ್‌ಗಳನ್ನು ಹೊಂದಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 20 ವಾರ್ಡ್‌ಗಳನ್ನು ವಿಭಜಿಸಿ, ರಾಜ್ಯ ಸರ್ಕಾರ ಗುರುತು ಮಾಡಿದೆ.

ಇದನ್ನೂ ಓದಿ : 5 GBA ಕೈವಶಕ್ಕೆ ಬಿಜೆಪಿ ತಂತ್ರ, 50:50ಗೆ JDS ಪಟ್ಟು! ಕಮಾಲ್ ಮಾಡುತ್ತಾ ಕಾಂಗ್ರೆಸ್?

ಹೀಗಾಗಿ, ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಅತ್ಯಂತ ಹೆಚ್ಚು ವಾರ್ಡ್‌ಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಇಂದೇ ಕ್ಷೇತ್ರದಲ್ಲಿ ಸಭೆ ನಡೆಸಿ, ದೇವರಿಗೆ ಪೂಜೆ ಸಲ್ಲಿಸಿ, ಇಲ್ಲಿಂದಲೇ ರಾಮ್ ಮಾಧವ್ ಕೆಲಸ ಆರಂಭಿಸಿದ್ದಾರೆ.

ಈ ವೇಳೆ ಕ್ಷೇತ್ರದಲ್ಲಿ ರಾಮ್ ಮಾಧವ್ ಅವರನ್ನು ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇಂದು ಕ್ಷೇತ್ರದಲ್ಲಿ ಪ್ರಮುಖರು ಹಾಗೂ ಪಾಲಿಕೆಯ ಮಾಜಿ ಸದಸ್ಯರನ್ನು ಒಗ್ಗೂಡಿಸಿ, ಉಸ್ತುವಾರಿಗಳ ಕಡೆಯಿಂದ ಶಾಸಕ ಎಂ.ಸತೀಶ್ ರೆಡ್ಡಿ ಸಭೆ ನಡೆಸಿದ್ದಾರೆ. ಆ ಮೂಲಕ ಚುನಾವಣಾ ತಯಾರಿಗೆ ಚುರುಕು ಮುಟ್ಟಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!