ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ ಶೀಘ್ರದಲ್ಲೇ ಬರಲಿದೆ ಎಂದು ವರದಿಯಾಗಿದೆ. ಚಿತ್ರಕ್ಕೆ “ಲೀಡರ್ ರಾಮಯ್ಯ”ಎಂದು ಶೀರ್ಷಿಕೆ ಇಟ್ಟಿದ್ದು, 50 ಕೋಟಿ ಬಜೆಟ್ ನಲ್ಲಿ ಸಿನೆಮಾ ಮೂಡಿ ಬರಲಿದೆ ಎನ್ನಲಾಗಿದೆ.
ಈಗಾಗಲೇ ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಕಾಣಲಿದೆ. ಸಿದ್ದರಾಮಯ್ಯ ಪಾತ್ರದಲ್ಲಿ ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ
ಬಯೋಪಿಕ್ ಸಿನಿಮಾ ಶೀಘ್ರದಲ್ಲೇ ಸೆಟ್ಟೆರಲಿದ್ದು, ಶ್ರೀ ರಾಮನವಮಿ ದಿನವಾದ ಇಂದು ಸಿನಿಮಾದ ಪೋಸ್ಟರ್ ಔಟ್ ಆಗಿದೆ. ಚಿತ್ರಕ್ಕೆ ಸತ್ಯಂ ರತ್ನಂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಯಾತ್ ಪೀರ್ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ.