ಬಿಹಾರ: 18 ದಿನದಲ್ಲಿ ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪ್ ಅನ್ನು(5 seater electric jeep) ಬಿಹಾರದ(bihar) ಯುವಕನೊಬ್ಬ ಸಿದ್ಧಪಡಿಸಿದ್ದಾನೆ. ಬಿಹಾರದ ಮುರ್ಷಿದ್ ಅಲಂ ಎಂಬುವವರೇ ಹೀಗೆ ಕೇವಲ 18 ದಿನದಲ್ಲಿ ಇಲೆಕ್ಟ್ರಿಕ್ ಜೀಪ್ ನಿರ್ಮಾಣ ಮಾಡಿದವರು. ಬಿಹಾರದ ಪೂರ್ನಿಯಾದ ಜನ ಈಗ ಇದನ್ನು ದೇಶಿ ಟೆಸ್ಲಾ ಎಂದು ಕರೆಯುತ್ತಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ಬಾಲಕಿಯರೊಡನೆ ಆನ್ ಲೈನ್ ಗ್ರೂಮಿಂಗ್ – ಯುಕೆಯಲ್ಲಿ ಭಾರತೀಯನ ಬಂಧನ! VIDEOಈ ಇಲೆಕ್ಟ್ರಿಕ್ ಜೀಪನ್ನು ನಿರ್ಮಾಣ ಮಾಡಲಾಗಿದ್ದು, ಒಮ್ಮೆ ಸಂಪೂರ್ಣವಾಗಿ 5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಈ ಜೀಪನ್ನು ಸುಮಾರು 100 ಕಿಲೋ ಮೀಟರ್‌ವರೆಗೆ ಓಡಿಸಬಹುದಾಗಿದೆ.
ಅದಕ್ಕಿಂತಲೂ ಇಂಟರೆಸ್ಟಿಂಗ್ ವಿಚಾರ ಎಂದರೆ ಈ ಇಲೆಕ್ಟ್ರಿಕ್ ಜೀಪನ್ನು ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಹಾಗೂ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿಲೋ ಮೀಟರ್ ದೂರವರೆಗೆ ಪ್ರಯಾಣಿಸಬಹುದು ಎಂಬುದು.
ಸಣ್ಣದೊಂದು ವಾಹನ ರಿಪೇರಿ ಶಾಪೊಂದನ್ನು ನಡೆಸುತ್ತಿರುವ ಮುರ್ಷಿದ್ ಅಲಂ ಅವರು ಈ ಜೀಪನ್ನು ನಿರ್ಮಾಣ ಮಾಡಿದ್ದಾರೆ. ಶಿಕ್ಷಣ ಮುಗಿಸಿದ ಮುರ್ಷಿದ್ ಹಲವು ಕಡೆ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಇದಾದ ಬಳಿಕ ತನ್ನದೇ ಗ್ರಾಮದಲ್ಲಿ ಸ್ವಂತ ಗ್ಯಾರೇಜ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ.
ಈ ಸಮಯದಲ್ಲಿ ತನ್ನ ಊರಿನ ರೈತರು ಮತ್ತು ಸಣ್ಣ ವ್ಯಾಪಾರಿಗಳು ದೈನಂದಿನ ಕೆಲಸಗಳಿಗಾಗಿ ದುಬಾರಿ ಪೆಟ್ರೋಲ್ ವಾಹನಗಳನ್ನು ಅವಲಂಬಿಸಿರುವುದನ್ನು ಕಂಡು, ಅವರಿಗೆ ಕಡಿಮೆ ವೆಚ್ಚದ ಪರ್ಯಾಯವಾಗಿ ಏನನ್ನಾದರೂ ಆವಿಷ್ಕರಿಸಬೇಕು ಎಂಬ ಆಲೋಚನೆಯಲ್ಲಿದ್ದ ಹಾಗೆ ವಾಹನ ತಯಾರಿಸಲು ಬೇಕಾದ ವಸ್ತುಗಳನ್ನು ಸಿದ್ಧಪಡಿಸಿ ಕೆಲಸ ಆರಂಭಿಸಿಯೇ ಬಿಟ್ಟ ಅದರಂತೆ ಕೇವಲ 18 ದಿನದಲ್ಲೇ ಐದು ಜನ ಪ್ರಯಾಣಿಸಬಹುದಾದ ಎಲೆಕ್ಟಿಕ್ ಜೀಪ್ ಒಂದನ್ನು ತಯಾರಿಸಿ ಎಲ್ಲರ ಗಮನಸೆಳೆದಿದ್ದಾನೆ.
ಡಿಸೇಲ್ ಹಾಗೂ ಪೆಟ್ರೋಲ್ ವಾಹನಗಳು ದುಬಾರಿ ಹಾಗೂ ಅವುಗಳನ್ನು ನಿರ್ವಹಣೆ ಮಾಡುವುದಕ್ಕೂ ಸಾಕಾಷ್ಟು ಹಣ ಬೇಕಾಗುತ್ತದೆ. ಹಾಗೆಯೇ ವಾಣಿಜ್ಯ ಕೆಲಸಗಳಿಗೆ ಅದರಲ್ಲು ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇಲೆಕ್ಟ್ರಿಕ್ ವಾಹನಗಳು ತಲುಪುವುದು ಸಾಧ್ಯವಿಲ್ಲ.
ಹೀಗಾಗಿ ಈ ಬಗ್ಗೆ ಯೋಚನೆ ಮಾಡಿದ ಅವರು ತಮ್ಮ ಈ ನೆಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಓಡಾಡುವುದಕ್ಕೆ ಸಹಾಯವಾಗುವಂತೆ ಹಾಗೂ ಕೃಷಿ ಕೆಲಸಗಳಿಗೆ ಸಹಕಾರಿ ಆಗಲಿ ಎಂಬ ಉದ್ದೇಶವನ್ನು ಮನಸ್ಸಲ್ಲಿಟ್ಟುಕೊಂಡು ಈ ಇಲೆಕ್ಟ್ರಿಕ್ ಜೀಪನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಾಹನವು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ನಾಲ್ಕು ಚಕ್ರಗಳು, ಸ್ಪೀಡೋಮೀಟರ್, ಪವರ್ ಸ್ಟೀರಿಂಗ್ ಮತ್ತು ಚಾರ್ಜಿಂಗ್ ಪಾಯಿಂಟ್ ಅನ್ನು ಒಳಗೊಂಡಿದೆ. ಬೆಳೆಗಳು, ರಸಗೊಬ್ಬರಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ಹೆಚ್ಚುವರಿ ಟ್ರಾಲಿಯನ್ನು ಇದಕ್ಕೆ ಜೋಡಿಸಬಹುದು, ಇದು ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದರ ಪೂರ್ಣ ಚಾರ್ಜ್‌ಗೆ ಸುಮಾರು ಐದು ಗಂಟೆಗಳು ಬೇಕಾಗುತ್ತದೆ, ನಂತರ ಜೀಪ್ ಸುಮಾರು 100 ಕಿಲೋಮೀಟರ್ ಓಡಬಹುದು. ಭಾರತದಲ್ಲಿ ವಾಹನಗಳು ನಿಧಾನವಾಗಿ ಡೀಸೆಲ್ ಮತ್ತು ಪೆಟ್ರೋಲ್‌ನಿಂದ ವಿದ್ಯುತ್‌ಗೆ ಬದಲಾಗುತ್ತಿರುವ ಕಾಲಘಟ್ಟದಲ್ಲೇ ಮುರ್ಷಿದ್ ಅವರು ಕಡಿಮೆ ವೆಚ್ಚದಲ್ಲಿ ಈ ಜೀಪನ್ನು ನಿರ್ಮಿಸಿದ್ದಾರೆ.