Sunday, January 25, 2026
Homeಕ್ರೈಂBIG NEWS : ನಾಯಿಗೂ ಶ್ರೀರಾಮನ ಹೆಸರು - ವಿವಾದವೆಬ್ಬೆಸಿದ ಶಾಲಾ ಪ್ರಶ್ನೆಪತ್ರಿಕೆ!

BIG NEWS : ನಾಯಿಗೂ ಶ್ರೀರಾಮನ ಹೆಸರು – ವಿವಾದವೆಬ್ಬೆಸಿದ ಶಾಲಾ ಪ್ರಶ್ನೆಪತ್ರಿಕೆ!

ರಾಯ್ಪುರ : ಮರ್ಯಾದಾ ಪುರುಷ ಪ್ರಭು ಶ್ರೀರಾಮಚಂದ್ರನ (Shree rama) ಹೆಸರಿಗೆ ಅವಮಾನ (tease) ಮಾಡೋ ಕೆಲಸಗಳು ಕೆಲ ಕಿಡಿಗೇಡಿಗಳು ಆಗಿoದ್ದಾಗ್ಗೆ ಮಾಡ್ತಿದ್ದಾರೆ.

ಇದೀಗ ಛತ್ತೀಸ್ ಗಢದ (Chattisgarh) ಶಾಲೆಯೊಂದರಲ್ಲಿ ಪರೀಕ್ಷೆಯ ಇಂಗ್ಲಿಷ್ ಪತ್ರಿಕೆಯಲ್ಲಿನ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಎಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ನಾಯಿ ಹೆಸರು ಏನು ಅಂತಾ ಪ್ರಶ್ನೆ ಕೇಳಲಾಗಿತ್ತು. ಬಹು ಆಯ್ಕೆಯ ಉತ್ತರದಲ್ಲಿ ‘ರಾಮ್’ ಅಂತಾ ಇರುವುದೇ ಈ ವಿವಾದಕ್ಕೆ ಮೂಲ ಕಾರಣವಾಗಿದೆ.

ಮೋನಾ ನಾಯಿಯ ಹೆಸರನ್ನು ಗುರುತಿಸಲು ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ರಾಮು ಅಂತಾ ಹೆಸರು ಕೂಡಾ ಇದೆ. ಇದಕ್ಕೆ ಸಂಘಪರಿವಾರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ.

ಮಹಾಸಮುಂಡ್‌ನಲ್ಲಿರುವ ಡಿಇಒ ವಿಜಯ್ ಲಾಂಗೆಹ್ ಅವರ ಕಚೇರಿ ಎದುರು ಜಮಾಯಿಸಿದ್ದ ಸಂಘಪರಿವಾರದ ಕಾರ್ಯಕರ್ತರು ಪ್ರತಿಕೃತಿ ದಹಿಸಿ ಪ್ರತಿಭಟನೆ ಕೂಡ ನಡೆಸಲಾಗಿದೆ.

ರಾಜನಂದಗಾಂವ್ ಜಿಲ್ಲೆಯಲ್ಲಿ ಅರ್ಧ ವಾರ್ಷಿಕ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಸದ್ಯ ಶಾಲಾ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಶಿಕ್ಷಕರ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನ ಮಾಡಿದ್ದು, ಕೆಲ ಪೋಷಕರು ಕೂಡ ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕ್ಷುಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ – ಬೈಕ್ ಸವಾರರಿಗೆ ಬಿತ್ತು ಗೂಸಾ.! 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!