ಕಿರುತೆರೆ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆರಂಭವಾಗಿದೆ. ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಸ್ಪರ್ಧಿಗಳು ಈಗ ಫಿನಾಲೆಗೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ, ಫೈನಲ್ ತಲುಪಿ ಭಾರೀ ನಿರೀಕ್ಷೆ ಮೂಡಿಸಿದ್ದ ನಟಿ ಭವ್ಯಾ ದೊಡ್ಮನೆಯಿಂದ ಹೊರಬಂದಿದ್ದಾರೆ.
ಇನ್ನೂ 5 ಜನ ಫೈನಲ್ ಓಟದಲ್ಲಿ ಮುಂದುವರಿದಿದ್ದು, ಹನುಮಂತ, ತ್ರಿವಿಕ್ರಮ, ಮಂಜು, ಮೋಕ್ಷಿತ ಹಾಗೂ ರಜತ್ ಅವರ ಪೈಕಿ, ಇವತ್ತಿನ ಸಂಚಿಕೆಯ ಕೊನೆಯಲ್ಲಿ ಯಾವ ಸ್ಪರ್ಧಿ ಹೊರಬರಲಿದ್ದಾರೆ ಮತ್ತು ನಾಳೆ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.