Thursday, April 16, 2026
Homeಟಾಪ್ ನ್ಯೂಸ್VIRAL : ಪೊಳಲಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ, ಸೀರೆಯ ಸಿಂಪಲ್ ಲುಕ್ ಗೆ ಫ್ಯಾನ್ಸ್ ಖುಷ್...

VIRAL : ಪೊಳಲಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ, ಸೀರೆಯ ಸಿಂಪಲ್ ಲುಕ್ ಗೆ ಫ್ಯಾನ್ಸ್ ಖುಷ್ : VIDEO

ದಕ್ಷಿಣ ಕನ್ನಡ : ಬಿಗ್ ಬಾಸ್ (Bigboss) ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ (Chaitra kundapura) ಅವರು ಇತ್ತೀಚೆಗೆ ದಕ್ಷಿಣ ಕನ್ನಡದ ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ (Rajarajeshwari temple) ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಈ ಭೇಟಿಯ ವಿಶೇಷವೆಂದರೆ ಅವರು ತೋರಿದ ಅಪ್ಪಟ ಸರಳತೆ ಮತ್ತು ಸಂಪ್ರದಾಯಬದ್ಧ ಉಡುಗೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.

ಹೌದು ತಮ್ಮ ಅಭಿಮಾನಿಯೊಬ್ಬರು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದ ಸೀರೆಯನ್ನು ಧರಿಸುವ ಮೂಲಕ ಅವರು ಜನಸಾಮಾನ್ಯರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ.ಚೈತ್ರ ತಮ್ಮ ಪತಿ ಶ್ರೀಕಾಂತ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಚೈತ್ರಾ, ದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿವಾದಗಳಿಂದ ದೂರ ಸರಿದು, ಶಾಂತಚಿತ್ತರಾಗಿ ದೇವಸ್ಥಾನದ ಆವರಣದಲ್ಲಿ ಕಾಲ ಕಳೆದರು.

ಈ ಸಂದರ್ಭದಲ್ಲಿ ಸಿಕ್ಕ ಅಭಿಮಾನಿಗಳೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾ ಸೆಲ್ಫೀ ತೆಗೆಸಿಕೊಂಡಿದ್ದು ಅವರ ಸೌಜನ್ಯಕ್ಕೆ ಸಾಕ್ಷಿಯಾಗಿತ್ತು.ಚೈತ್ರಾ ಅವರು ಈ ಸಂದರ್ಭದಲ್ಲಿ ಧರಿಸಿದ್ದ ಓಲೆ ಮತ್ತು ಜುಮುಕಿಗಳು ಎಲ್ಲರ ಗಮನ ಸೆಳೆದವು. ಇವುಗಳನ್ನು ಅವರ ಪತಿ ಬಹಳ ವರ್ಷಗಳ ಹಿಂದೆ ಪ್ರೀತಿಯಿಂದ ಕೊಡಿಸಿದ್ದರು. ಹಳೆಯ ಉಡುಗೊರೆಗಳನ್ನು ಇಂದಿಗೂ ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿರುವುದು ಮತ್ತು ಅಂತಹ ಸವಿನೆನಪುಗಳೊಂದಿಗೆ ದೇವಿಯ ಸನ್ನಿಧಿಗೆ ಬಂದಿರುವುದು ಅವರ ಸಂಸ್ಕಾರ ಮತ್ತು ಕುಟುಂಬದ ಮೇಲಿರುವ ಅತೀವ ಪ್ರೇಮವನ್ನು ಎತ್ತಿ ತೋರಿಸುತ್ತದೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : “ಕಣಕಣದಲ್ಲೂ ಕೇಸರಿ”..! ಗುಟ್ಕಾ ಉಗುಳಿದ ಭಾರತೀಯನಿಗೆ ನೇಪಾಳದಲ್ಲಿ ಛೀಮಾರಿ! – VIDEO

ಹೆಚ್ಚಿನ ಸುದ್ದಿ

Change Language »
error: Content is protected !!