Saturday, March 15, 2025
Homeಟಾಪ್ ನ್ಯೂಸ್BIG TWIST: 18 ವರ್ಷದಾಕೆ ಜೊತೆಗಿನ 50 ರ ಅಂಕಲ್ ಮದುವೆ ಪ್ರಸಂಗಕ್ಕೆ ಹೊಸ ತಿರುವು-...

BIG TWIST: 18 ವರ್ಷದಾಕೆ ಜೊತೆಗಿನ 50 ರ ಅಂಕಲ್ ಮದುವೆ ಪ್ರಸಂಗಕ್ಕೆ ಹೊಸ ತಿರುವು- ಹುಡುಗಿಯಿಂದ ಗಂಭೀರ ಆರೋಪ

ಬೆಂಗಳೂರು: 18 ವರ್ಷ ಹುಡುಗಿಯನ್ನು 50 ವರ್ಷ ಅಂಕಲ್‌ ಮದುವೆಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಹುಡುಗಿಯನ್ನು ಬಲವಂತವಾಗಿ ಮದುವೆಯಾಗಿ ಮನೆಯಲ್ಲಿ ಕೂಡಿಹಾಕಿ 15 ದಿನ ನರಕ ತೋರಿಸಿದ್ದಾನೆ ಎಂದು ಹುಡುಗಿ ಆರೋಪಿಸಿದ್ದಾಳೆ.

ಅಂಕಲ್‌ ನಿಂದ ತಪ್ಪಿಸಿಕೊಂಡು ತಂದೆ-ತಾಯಿ ಬಳಿಗೆ ಓಡಿಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುವತಿ, ಪ್ರಕಾಶ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ನಾನು ಕೊಲ್ಹಾಪುರದಲ್ಲಿದ್ದೆ. ಕಾಲ್ ಮಾಡಿ ನನ್ನ‌ ಹೊಟೆಲ್ ಗೆ ಕರೆದುಕೊಂಡು ಹೋಗಿದ್ದ. ಬಳಿಕ ನನಗೆ ಕೋಲ್ ಡ್ರಿಂಕ್ಸ್ ನಲ್ಲಿ ಏನೋ ಹಾಕಿ ರೂಮ್ಗೆ ಕರೆದುಕೊಂಡು ಹೋಗಿದ್ದ. ಯಾವ ಊರು ಏನ ಅಂತ ಹೇಳಿಲ್ಲ. ಮಾತು ಕೇಳದೆ ಹೋದ್ರೆ ನನ್ನ ತಂದೆಯನ್ನು ಸಾಯಿಸುವುದಾಗಿ ಧಮ್ಕಿ ಹಾಕಿದ್ದ ಎಂದಿದ್ದಾಳೆ.

ನನ್ನ ಮಾತು ಕೇಳದಿದ್ದರೆ ತಂದೆ, ತಾಯಿ ಕೊಲ್ಲುವುದಾಗಿ ಹೆದರಿಸಿ ನನ್ನ ಮದುವೆಯಾಗಿದ್ದ. ಮದುವೆಯಾಗಿದ್ದು ಎಲ್ಲಿ ಅಂತಾನೂ ನನಗೆ ಗೊತ್ತಿಲ್ಲ. ನನ್ನ ತಂದೆ, ತಾಯಿ ವಿರುದ್ಧವೇ ದೂರು ಕೊಡು ಎಂದು ತಾಕೀತು ಮಾಡಿದ್ದ. ಆದರೆ ನಾನು ಪ್ರಕಾಶ್ ವಿರುದ್ಧವೇ ಪೊಲೀಸರಿಗೆ ದೂರು ನೀಡುವೆ. ವಿಡಿಯೋ ತೋರಿಸಿ ನನ್ನ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ.

ಈ ಸಂಬಂಧ ಕರೀಷ್ಮಾ ಹುಬ್ಬಳ್ಳಿಯ ಕೇಶ್ವಾಪೂರ ಠಾಣೆಗೆ ದೂರು ನೀಡಿದ್ದು, ಒಂದು ವರ್ಷದ ಹಿಂದೆಯೂ ನನಗೆ ಪ್ರಕಾಶ್ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!