Thursday, April 16, 2026
Homeಟಾಪ್ ನ್ಯೂಸ್BIG NEWS : ನೂರಕ್ಕೆ 33 ಅಂಕ ತೆಗೆದ್ರೆ ಸಾಕು - ಪಿಯುಸಿಗೂ ನಿಯಮ ವಿಸ್ತರಿಸಿದ...

BIG NEWS : ನೂರಕ್ಕೆ 33 ಅಂಕ ತೆಗೆದ್ರೆ ಸಾಕು – ಪಿಯುಸಿಗೂ ನಿಯಮ ವಿಸ್ತರಿಸಿದ ಸರ್ಕಾರ..!!

ಬೆಂಗಳೂರು : ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ (Second Puc ) ಮಾದರಿಯಲ್ಲೇ ಈಗ ಪ್ರಥಮ ಪಿಯುಸಿ ಪರೀಕ್ಷೆಯಲ್ಲೂ (Exam ) ಉತ್ತೀರ್ಣರಾಗಲು ಕನಿಷ್ಠ ಅಂಕಗಳ ಪ್ರಮಾಣವನ್ನು ಶೇ. 33ಕ್ಕೆ ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.

ಪದವಿ ಪೂರ್ವ ಶಿಕ್ಷಣವು ಎರಡು ವರ್ಷಗಳ ಸಂಯುಕ್ತ ಕೋರ್ಸ್ ಆಗಿರುವುದರಿಂದ, ಎರಡೂ ತರಗತಿಗಳಲ್ಲಿ ಏಕರೂಪದ ಮೌಲ್ಯಮಾಪನ ನಿಯಮ ಇರಬೇಕೆಂಬ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಈ ನಿರ್ಧಾರ ವಿದ್ಯಾರ್ಥಿಗಳ ವಲಯದಲ್ಲೂ ಸಾಕಷ್ಟು ಸಂತಸಕ್ಕೆ ಕಾರಣವಾಗಿದೆ.

2025-26ನೇ ಸಾಲಿನಿಂದಲೇ ಈ ನಿಯಮ ಅನ್ವಯವಾಗಲಿದೆ. ಮೌಲ್ಯಮಾಪನ ವಿಧಾನದಲ್ಲಿ ಏಕರೂಪತೆ ಕಾಪಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ದೇಗುಲಗಳಿಗೂ ತಟ್ಟಿದ್ದ ಮಧ್ಯಪ್ರಾಚ್ಯ ಯುದ್ಧದ ಬಿಸಿ – ಅನ್ನ ಪ್ರಸಾದ ಬಂದ್! 

ಹೆಚ್ಚಿನ ಸುದ್ದಿ

Change Language »
error: Content is protected !!