ನವದೆಹಲಿ : ಕಾಲ ಕೆಟ್ಟೋಗಿದೆ, ಈಗೆಲ್ಲಾ ಡಿಜಿಟಲ್ ಕಾಲ, ಬ್ರಷ್ ನಿಂದ ಹಿಡಿದು ಬಂಗಾರದವರೆಗೂ ನಾವು ಪ್ರಿಫರ್ ಮಾಡೋದು ಆನ್‌ಲೈನ್ (Online) ಖರೀದಿಯನ್ನೇ. ಆದರೆ ಅದು ಕತ್ತಿ ಮೇಲಿನ ನಡಿಗೆ ಅನ್ನೋದು ಗೊತ್ತಾಗೋದು ಹೀಗೆ ಕೈ ಸುಟ್ಟುಕೊಂಡಾಗ. ಕೆಲವೇ ನಿಮಿಷದಲ್ಲಿ ವಸ್ತುಗಳನ್ನು ಡೆಲಿವರಿ ಮಾಡಬಲ್ಲ ಆನ್ ಲೈನ್ ಸರ್ವೀಸ್ ಕೊಡುವವವರು, ಹೂಡಿಕೆ ಮಾಡಿ ಅನ್ನೋರು, ಓಟಿಪಿ ಕೇಳೋರ ಸಂಖ್ಯೆ ಹೆಚ್ಚಾಗಿದೆ. ಅವ್ರನ್ನು ನಂಬಿದ್ರೆ ನಾಮ ಬೀಳೋದು ಪಕ್ಕಾ.
ಆನ್ ಲೈನ್ ಫ್ರಾಡ್, ಆನ್‌ಲೈನ್ ವಂಚನೆಗಳ ವಿರುದ್ಧ ನಿರಂತರ ಎಚ್ಚರಿಕೆಗಳು ಸೇರಿದಂತೆ ಹಲವಾರು ಜಾಗೃತಿ ಅಭಿಯಾನಗಳ ಹೊರತಾಗಿಯೂ, ನಾಗರಿಕರು ಸೈಬರ್ ವಂಚನೆಗಾರರಿಂದ ಮೋಸಕ್ಕೊಳಗಾಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಲೇ ಇದ್ದಾರೆ.
ಉದಾಹರಣೆಗೆ ಕೇರಳದಿಂದ ಸ್ಕ್ಯಾಮರ್‌ಗಳು ಪ್ರತಿ ದಿನ ಏನಿಲ್ಲ ಅಂದರೂ 85 ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡುತ್ತಿದ್ದಾರೆ. ಈ ವರ್ಷ ಸೈಬರ್ ವಂಚನೆಗಳಲ್ಲಿ ಕೇರಳಿಗರು 300 ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.
ಸಂಕಷ್ಟ ಬಂದಾಗ ಸಚೇತ್
ಒಂದು ವೇಳೆ ಕಳ್ಳತನ, ದರೋಡೆ ಮಾಡುವವರ ಒಂದು ವರ್ಗವಾದರೆ, ಆನ್ ಲೈನ್ನಲ್ಲಿ ವಿವಿಧ ಸ್ಕೀಮ್ಗಳ ಮೂಲಕ ಒಂದೇ ಬಾರಿಗೆ ನೂರಾರು, ಸಾವಿರಾರು, ಲಕ್ಷಾಂತರ ಜನರನ್ನು ಯಾಮಾರಿಸಿ ಕೋಟ್ಯಂತ ರೂ ಗುಳುಂ ಮಾಡುವ ವಂಚಕರು ಹೆಚ್ಚಾಗುತ್ತಿದ್ದಾರೆ.
ಕೆಲವೊಮ್ಮೆ ವಂಚಕರು ನಿಮ್ಮೆ ಹಣ ಡಬಲ್ ಮಾಡುತ್ತೇವೆ, ಷೇರು ಹೂಡಿಕೆಯಿಂದ ಭರ್ಜರಿ ಲಾಭ ಕೊಡಿಸುತ್ತೇವೆ, ಅತ್ಯಧಿಕ ರಿಟರ್ನ್ ಕೊಡುತ್ತೇವೆ ಇತ್ಯಾದಿ ನಾನಾ ಆಫರ್ ಒಡ್ಡಿ ಜನರಿಂದ ಹಣ ಪಡೆದು ಯಾಮಾರಿಸುವ ವಂಚಕರು ಹಲವರಿದ್ದಾರೆ. ಇಂಥಾ ಸಂದರ್ಭದಲ್ಲಿ ಸಹಾಯಕ್ಕೆ ಬರೋದೇ ಸಚೇತ್.
ವಂಚನೆಯಾಗಿದ್ದರೆ ದೂರು ಕೊಡಲು ಅವಕಾಶ
ನಿಮಗೆ ಆನ್‌ಲೈನ್ ಫ್ರಾಡ್ ಆಗಿದ್ದರೆ ಇದೇ ಸಚೇತ್ ಪೋರ್ಟಲ್ನಲ್ಲಿ ದೂರು ಕೊಡುವ ಅವಕಾಶ ಇದೆ. ಪೋರ್ಟಲ್ ಮುಖಪುಟದಲ್ಲಿ ‘ಫೈಲ್ ಎ ಕಂಪ್ಲೇಂಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ನಿಮ್ಮನ್ನು ವಂಚಿಸಿದ ಸಂಸ್ಥೆ ಯಾವ ರೆಗ್ಯುಲೇಟರ್ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿದ್ದರೆ ಅದನ್ನು ಆಯ್ದುಕೊಂಡು ದೂರು ಕೊಡಬಹುದು.
ಇದನ್ನೂ ಓದಿ: ಹಳೆಯ ಬ್ಯಾಂಕ್ ಖಾತೆಗಳಲ್ಲಿ ಹಣ ಮರೆತಿದ್ದೀರಾ..?- ಮರಳಿ ಪಡೆಯುವಲ್ಲಿ ನೆರವಾಗುತ್ತೆ RBI!
ಸಚೇತ್ ಪೋರ್ಟಲ್ನಲ್ಲಿ ಸಂಸ್ಥೆಗಳ ಮಾನ್ಯತೆ ಪರಿಶೀಲಿಸಿ…
ದೇಶದಲ್ಲಿ ಹಣಕಾಸು ಸ್ಕೀಮ್ ಆಫರ್ ಮಾಡುವ ಒಂದು ಕಂಪನಿಯು ಯಾವುದಾದರೂ ರೆಗ್ಯುಲೇಟರ್ನಲ್ಲಿ ಮಾನ್ಯತೆ ಹೊಂದಿರಬೇಕು. ಷೇರು ಟಿಪ್ಸ್ ಕೊಡುವವರು ಸೆಬಿಯಲ್ಲಿ ನೋಂದಣಿ ಮಾಡಿಸಿರಬೇಕು. ಠೇವಣಿ ಪಡೆಯುವವರು ಆರ್ಬಿಐ ನೊಂದಾವಣಿ ಹೊಂದಿರಬೇಕು. ಹೀಗೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ರೆಗ್ಯುಲೇಟರ್ಗಳ ಮಾನ್ಯತೆ ಹೊಂದಿರಬೇಕು. ನಿಮಗೆ ಆಫರ್ ಮಾಡಿರುವ ಕಂಪನಿ ಮಾನ್ಯತೆ ಹೊಂದಿದೆಯಾ ಎಂದು ಪರಿಶೀಲಿಸಲು ಆರ್ಬಿಐನ ಸಚೇತ್ ಪೋರ್ಟಲ್ಗೆ ಭೇಟಿ ನೀಡಿ.
ಅದರ ವಿಳಾಸ ಇಲ್ಲಿದೆ: http://sachet.rbi.org.in/