Thursday, April 16, 2026
Homeಟಾಪ್ ನ್ಯೂಸ್BIG NEWS: ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ವಂಚನೆ- ಸೈಬರ್ ಕ್ರೈಂ ಜಾಲದಿಂದ ಪಾರಾಗುವುದು ಹೇಗೆ? ಇಲ್ಲಿದೆ...

BIG NEWS: ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ವಂಚನೆ- ಸೈಬರ್ ಕ್ರೈಂ ಜಾಲದಿಂದ ಪಾರಾಗುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ (Middle East War) ನಡೆಯುತ್ತಿರುವ ಯುದ್ಧದ ಪರಿಣಾಮ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ (LPG Cylinder) ಕೊರತೆ ಎದುರಾಗಿದೆ. ಹೀಗಾಗಿ ಸದ್ಯ ಗ್ಯಾಸ್ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ‘ತಕ್ಷಣದ ಎಲ್​ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಬಂದರೆ ಅದನ್ನು ನಂಬಬೇಡಿ.

ಹೌದು.. ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಲು ಜನರು ಪರದಾಡುತ್ತಿರುವ ಸಂದರ್ಭದಲ್ಲಿ ಸೈಬರ್ ಅಪರಾಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು LPG ಸಿಲಿಂಡರ್ ರೀಫಿಲ್ಲಿಂಗ್​ಗೆ ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ವಂಚನೆಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್​ಪಿಜಿ ಸಿಲಿಂಡರ್​​ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಮತ್ತು ಪೂರೈಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ವದಂತಿಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದರಿಂದ, ಸೈಬರ್ ಅಪರಾಧಿಗಳು ಜನರ ಭಯದ ಲಾಭ ಪಡೆಯಲು ಮುಂದಾಗಿದ್ದಾರೆ. ಈ ರೀತಿಯ ಸೈಬರ್ ಅಪರಾಧಿಗಳು ಗ್ಯಾಸ್ ಬುಕಿಂಗ್ ಸೇವೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇಂಡಕ್ಷನ್ ಸ್ಟೌವ್‌ಗೆ ಭಾರಿ ಬೇಡಿಕೆ, ಹುಬ್ಬಳ್ಳಿಯ ಹೋಟೆಲ್​​​​​​​​ಗಳಲ್ಲಿ ಕಟ್ಟಿಗೆ ಒಲೆ ಮೊರೆಹೋದ ಮಾಲೀಕರು

ದಾರಿತಪ್ಪಿಸುವ ಜಾಹೀರಾತುಗಳು ಸೋಷಿಯಲ್ ಮೀಡಿಯಾ ಮತ್ತು ಮೆಸೇಜ್ ಅಪ್ಲಿಕೇಶನ್‌ಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿವೆ. ಈ ನಕಲಿ ಪ್ರಚಾರಗಳು ವೇಗವಾಗಿ LPG ಸಿಲಿಂಡರ್ ವಿತರಣೆಯನ್ನು ನೀಡುವುದಾಗಿ ನಂಬಿಸುತ್ತಿವೆ. ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ, ಹೆಚ್ಚಿನ ಸಿಲಿಂಡರ್​ ಕೊಡುತ್ತೇವೆ ಎಂಬ ಆಮಿಷವೊಡ್ಡಿ ಗ್ರಾಹಕರನ್ನು ಸುಲಿಗೆ ಮಾಡುವ ಜಾಲ ಸೃಷ್ಟಿಯಾಗಿದೆ. ಇಂತಹ ಮೋಸಗೊಳಿಸುವ ಪ್ರಚಾರಗಳನ್ನು ಸಾಮಾನ್ಯವಾಗಿ WhatsApp ಫಾರ್ವರ್ಡ್‌ಗಳು, SMS ಸಂದೇಶಗಳು ಮತ್ತು ಇತರ ಮೆಸೇಜಿಂಗ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಈ ಸಂದೇಶಗಳು ಸಾಮಾನ್ಯವಾಗಿ ಕಾನೂನುಬದ್ಧ ಗ್ಯಾಸ್ ಬುಕಿಂಗ್ ಪೋರ್ಟಲ್‌ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇವರು ಸಾಮಾನ್ಯವಾಗಿ ತಕ್ಷಣದ ಸಿಲಿಂಡರ್ ವಿತರಣೆಗೆ ಆನ್‌ಲೈನ್‌ನಲ್ಲಿ ಮುಂಗಡ ಪಾವತಿ ಮಾಡಲು ಕೇಳುತ್ತಾರೆ. ನೀವೇನಾದರೂ ಪ್ರಿ ಬುಕಿಂಗ್​ಗೆ ಹಣ ಪಾವತಿ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ ಅಧಿಕೃತ ವೆಬ್​​ಸೈಟ್ ಅನ್ನು ಹೊರತುಪಡಿಸಿ ಬೇರಾವುದೇ ಸೈಟ್​​ಗಳಲ್ಲೂ ಮುಂಗಡ ಹಣ ಪಾವತಿ ಮಾಡಿ ಸಿಲಿಂಡರ್ ಬುಕ್ ಮಾಡುವುದು ಸುರಕ್ಷಿತವಲ್ಲ. ಯಾವುದೇ ಕಾರಣಕ್ಕೂ ಬ್ಯಾಂಕ್ ಅಕೌಂಟ್, OTP, UPI ಪಿನ್‌ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬೇರೆ ಯಾವುದೇ ಇತರ ಗೌಪ್ಯ ಡೇಟಾದಂತಹ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಇಂತಹ ವಂಚನೆಗಳು ನಿಮಗೂ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು.

ಇನ್ನು ಸೈಬರ್ ವಂಚನೆ ದೂರುಗಳಿಗೆ ಪ್ರತಿಕ್ರಿಯಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು 1930ಗೆ ಕರೆ ಮಾಡುವ ಮೂಲಕ ವಂಚನೆಗೆ ಒಳಗಾದವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕವೂ ದೂರುಗಳನ್ನು ನೋಂದಾಯಿಸಬಹುದಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!