Thursday, July 16, 2026
Homeಟಾಪ್ ನ್ಯೂಸ್BIG NEWS : ಚಿಕ್ಕಬಳ್ಳಾಪುರದಿಂದ ಅಲಿ ಖಮೇನಿ ಅಂತ್ಯಕ್ರಿಯೆಗೆ ಹೊರಟ ಜನ!

BIG NEWS : ಚಿಕ್ಕಬಳ್ಳಾಪುರದಿಂದ ಅಲಿ ಖಮೇನಿ ಅಂತ್ಯಕ್ರಿಯೆಗೆ ಹೊರಟ ಜನ!

ಚಿಕ್ಕಬಳ್ಳಾಪುರ: ಇರಾನ್ (Iran ) ದೇಶದ ಖ್ಯಾತ ಧಾರ್ಮಿಕ ಹಾಗೂ ರಾಜಕೀಯ ನಾಯಕ ಅಯತೊಲ್ಲಾ ಖಮೇನಿ (khamanei )ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಿಂದ ಸುಮಾರು 100 ಜನರು ಇರಾನ್‌ಗೆ ಪ್ರಯಾಣ ಬೆಳೆಸಿದ್ದಾರೆ.

ರಾಜ್ಯದಲ್ಲಿ ‘ಮಿನಿ ಇರಾನ್’ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ಅಲಿಪುರ ಗ್ರಾಮಕ್ಕೂ ಇರಾನ್ ದೇಶಕ್ಕೂ ದಶಕಗಳ ಕಾಲದ ಭಾವನಾತ್ಮಕ ಹಾಗೂ ಧಾರ್ಮಿಕ ನಂಟಿದೆ. ಅಲಿಪುರದಲ್ಲಿ ಶಿಯಾ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇರಾನ್ ಸಂಸ್ಕೃತಿ ಮತ್ತು ಧಾರ್ಮಿಕ ನಾಯಕರ ನಡೆ-ನುಡಿಗಳನ್ನು ಇಲ್ಲಿನ ಜನರು ಅಪಾರವಾಗಿ ಗೌರವಿಸುತ್ತಾರೆ ಹೀಗಾಗಿಯೇ ಇರಾನ್ ಗೆ ಅಲಿಪುರದಿಂದ ತೆರಳಿದ್ದಾರೆ.

ಏನಿದು ಹಿನ್ನೆಲೆ?

ಇರಾನ್‌ನ ಪ್ರಭಾವಿ ನಾಯಕರಾಗಿದ್ದ ಅಯತೊಲ್ಲಾ ಖಮೇನಿ ಅವರ ನಿಧನಕ್ಕೆ ಅಲಿಪುರ ಗ್ರಾಮದಲ್ಲಿ ತೀವ್ರ ಕಂಬನಿ ಮಿಡಿಯಲಾಗಿತ್ತು. ಅವರ ಮೇಲಿನ ಗೌರವ ಹಾಗೂ ಧಾರ್ಮಿಕ ಶ್ರದ್ಧೆಯ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಹಾಗೂ ಯುವಕರು ಸೇರಿ ಒಟ್ಟು 100 ಜನರ ತಂಡವೊಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇರಾನ್‌ಗೆ ತೆರಳಿದೆ.

‘ಮಿನಿ ಇರಾನ್’ ಅಲಿಪುರದ ವಿಶೇಷತೆ..!

ಅಲಿಪುರ ಗ್ರಾಮದಲ್ಲಿ ಇರಾನ್ ದೇಶದ ಶೈಲಿಯ ಧಾರ್ಮಿಕ ಆಚರಣೆಗಳು ಮತ್ತು ಕಟ್ಟಡಗಳು ಹೆಚ್ಚಾಗಿ ಕಂಡುಬರುತ್ತವೆ. ಹೀಗಾಗಿಯೇ ಇದನ್ನು ಸ್ಥಳೀಯವಾಗಿ ‘ಮಿನಿ ಇರಾನ್’ ಎಂದು ಕರೆಯಲಾಗುತ್ತದೆ.

ಇರಾನ್‌ನ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತು ನಾಯಕರೊಂದಿಗೆ ಈ ಗ್ರಾಮದ ಜನರು ನಿರಂತರ ಸಂಪರ್ಕ ಹೊಂದಿದ್ದಾರೆ.

ಈ ಭಾವುಕ ಪ್ರಸಂಗವು ಸದ್ಯ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇರಾನ್ ಜೊತೆಗಿನ ಅಲಿಪುರದ ಸಂಬಂಧದ ಆಳವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಹುಸಂಖ್ಯಾತ ಶಿಯಾ ಮುಸ್ಲಿಮರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮವು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಆಳವಾದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ಜನ ಖಮೇನಿ ಅವರನ್ನು ತಮ್ಮ ಪ್ರಮುಖ ಧರ್ಮಗುರುವೆಂದು ಗೌರವಿಸುತ್ತಾರೆ. ಈ ಚಿಕ್ಕ ಗ್ರಾಮವನ್ನು ”ಮಿನಿ ಇರಾನ್” ಎಂದೂ ಕರೆಯುತ್ತಾರೆ. 1981-82ರ ವೇಳೆ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು. ಇರಾನ್ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ನಿರ್ಮಿಸಲಾದ ಸಮುದಾಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಛ ನಾಯಕ ಖಮೇನಿ ಹತರಾಗಿದ್ದು, ಶನಿವಾರದಿಂದ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿವೆ.

ಇದನ್ನೂ ಓದಿ : ಆರ್​​ಎಸ್​​ಎಸ್ ‘ಪಥಸಂಚಲನಕ್ಕೆ ಅವಕಾಶವಿಲ್ಲ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ! 

ಹೆಚ್ಚಿನ ಸುದ್ದಿ

Change Language »
error: Content is protected !!