Friday, March 13, 2026
Homeಟಾಪ್ ನ್ಯೂಸ್BIG NEWS: ಸ್ಮಾರ್ಟ್ ಮೀಟರ್ ಅಳವಡಿಕೆ ವಿವಾದ.. ರಾಜ್ಯ ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್

BIG NEWS: ಸ್ಮಾರ್ಟ್ ಮೀಟರ್ ಅಳವಡಿಕೆ ವಿವಾದ.. ರಾಜ್ಯ ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು: ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳಡವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿ 2025ರ ಫೆಬ್ರವರಿ 13ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಯನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್​ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ನಡೀತು.

ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಎಷ್ಟು ಖರ್ಚಾಗುತ್ತದೆ ಎಂಬುದರ ಬಗ್ಗೆ ನೀವು ಆತಂಕ ಯಾಕೆ ವ್ಯಕ್ತಪಡಿಸುತ್ತೀರಿ? ಗ್ರಾಹಕರಿಗೆ ಹೊರೆಯಾಗುವುದನ್ನು ಎಂಬುದನ್ನು ಮಾತ್ರ ಹೇಳಿ ಎಂದು ಪೀಠ ಪ್ರಶ್ನಿಸ್ತು. ಸ್ಮಾರ್ಟ್‌ ಮೀಟರ್‌ ಅಳವಡಿಕೆಯ ಗುತ್ತಿಗೆಯನ್ನು ರಾಜಶ್ರೀ ಎಲೆಕ್ಟ್ರಿಕಲ್ಸ್‌ ನೀಡಲಾಗಿದೆ. ಬೆಸ್ಕಾಂನಿಂದ ರಾಜಶ್ರೀಗೆ ಹಣ ಹೋಗುತ್ತದೆ ಎಂದು ಅರ್ಜಿದಾರರ ಪರವಾಗಿ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಹೇಳಿದರು.

ರಾಜಶ್ರೀಗೆ ಎಷ್ಟು ಹಣ ಹೋಗುತ್ತದೆ ಎಂಬುದು ಆತಂಕಿತತಾಗಿದ್ದಾರೆಯೇ? ಗ್ರಾಹಕರಿಗೆ ಹೆಚ್ಚು ಹೊರೆಯಾಗುತ್ತದೆಯೇ ಎಂದು ಮತ್ತೆ ಪೀಠ ಪ್ರಶ್ನಿಸಿತ್ತು. ರಾಜಶ್ರೀಗೆ ಬೆಸ್ಕಾಂ ನೀಡುವುದು ಜನರ ಹಣ ತಾನೆ? ಸ್ಮಾರ್ಟ್‌ ಮೀಟರ್‌ ತೆಗೆದುಕೊಂಡಿರದೇ ಇರುವವರೂ ಹಣ ಪಾವತಿಸಬೇಕಾಗುವುದಲ್ಲಿವೇ ಎಂದು ಲಕ್ಷ್ಮಿ ಐಯ್ಯಂಗಾರ್ ಹೇಳಿದರು. ಸ್ಮಾರ್ಟ್‌ ಅಲ್ಲದವರೂ ಪಾವತಿಸಬೇಕು ಎಂಬುದು ನಿಮ್ಮ ಅಳಲು ಎಂದು ಪೀಠ ಹೇಳಿತು.

ರಾಜಸ್ಥಾನ ಮತ್ತು ಗೋವಾದಲ್ಲಿ ಸ್ಮಾರ್ಟ್‌ ಮೀಟರ್‌ಗೆ 900 ರೂಪಾಯಿ ಪಶ್ಚಿಮ ಬಂಗಾಳ 1800 ರೂಪಾಯಿ ಇದೆ. ಟಾರಿಫ್‌ ಹೆಚ್ಚಿಸಬೇಕಾದರೆ ಸಮಿತಿಯ ಮುಂದೆ ಇಡಬೇಕು. ಆದರೆ, ಅದನ್ನು ಸಮಿತಿಯ ಮುಂದೆ ಇಡಲಾಗಿಲ್ಲ ಎಂದು ಎಂದು ಲಕ್ಷ್ಮಿ ಐಯ್ಯಂಗಾರ್ ವಾದಿಸಿದರು. ಅರ್ಜಿದಾರರ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಳ ಪ್ರಭುಲಿಂಗ ನಾವದಗಿ, ಸ್ಮಾರ್ಟ್‌ ಮೀಟರ್‌ಗಳ ಬೆಲೆ ಕುರಿತು ಪಟ್ಟಿ ಮಾಡಲಾಗಿದೆ. ಇದರಲ್ಲಿ ಎಲ್ಲಾ ರಾಜ್ಯಗಳ ವಿವರಣೆ ಇದೆ ಎಂದರು.

ಮೂರು ಪಟ್ಟು ಹೆಚ್ಚಳ ದರ..

ಗುಜರಾತ್‌ನಲ್ಲಿ ಸಿಂಗಲ್‌ ಫೇಸ್‌ ಸ್ಮಾರ್ಟ್‌ ಮೀಟರ್‌ಗೆ 900 ರೂಪಾಯಿದೆ. ಮಧ್ಯಪ್ರದೇಶದಲ್ಲಿ 1170, ಒಡಿಶಾದಲ್ಲಿ 5000, ಪಂಜಾಬ್‌ನಲ್ಲಿ 4770 ರೂಪಾಯಿದೆ ಎಂದು ಪೀಠ ಹೇಳಿತು.
ಕರ್ನಾಟಕದಲ್ಲಿ ಮೂರು ಪಟ್ಟು ಹೆಚ್ಚಳ ದರವಿದೆ. ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾವದಗಿ ಹೇಳಿದರು.

ಕರ್ನಾಟಕ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ. ರಾಜಶ್ರೀ ಎಲೆಕ್ಟ್ರಿಕಲ್ಸ್‌ ಯಶಸ್ವಿಯಾಗಿರುವ ಬಿಡ್‌ದಾರರು ಅವರಿಗೇಕೆ ನೀವು ಅರ್ಜಿಯ ಪ್ರತಿ ನೀಡಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಕೇಳಿದರು.
2.23 ಕೋಟಿ ವಿದ್ಯುತ್‌ ಸಂಪರ್ಕಗಳಿವೆ. ಸ್ಮಾರ್ಟ್‌ ಮೀಟರ್‌ ಅಳವಡಿಸುವಂತಾದರೆ ಹಾನಿ ಅಪಾರವಾಗಲಿದೆ. ಅದನ್ನು ನಾನು ಹಗರಣ ಎನ್ನುವುದಿಲ್ಲ ಎಂದು ನಾವದಗಿ ಹೇಳಿದ್ರು.

ಜನರಿಗೆ ಬಿಸಿ ತಾಗಬಾರದು ಎಂಬ ವಿಚಾರವನ್ನಷ್ಟೇ ನ್ಯಾಯಾಲಯ ನೋಡಲಿದೆ. ಸ್ಮಾರ್ಟ್‌ ಮೀಟರ್‌ಗೆ ವಿಧಿಸುವ ದರಕ್ಕೆ ಸಂಬಂಧಿಸಿದಂತೆ ಮಾತ್ರ ಸರ್ಕಾರದಿಂದ ಸಮರ್ಥನೆ ಬೇಕಿದೆ ಎಂದು ಅರ್ಜಿಯನ್ನು ನ್ಯಾಯಾಲಯ ಸೋಮವಾರಕ್ಕೆ ಅರ್ಜಿ ಮುಂದೂಡಿದ್ರು.

ಹೆಚ್ಚಿನ ಸುದ್ದಿ

Change Language »
error: Content is protected !!