ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ದಿನೇ ದಿನೇ ಹೊಸ ಹೊಸ ಬೆಳವಣಿಗೆ ನಡೆಯುತ್ತಿವೆ. ಏಕಾಏಕಿ ಯಡಿಯೂರಪ್ಪ ಆ್ಯಕ್ಟಿವ್ ಆಗಿದ್ದಾರೆ. ಇದ ಮಧ್ಯೆ ರಾಜ್ಯದ ಇಬ್ಬರು ಪ್ರಬಲ ನಾಯಕರ ಮಧ್ಯೆ ಅಸಮಧಾನದ ಕಿಡಿ ಹೊತ್ತಿದೆ.
ಬೊಮ್ಮಾಯಿ, ಯಡಿಯೂರಪ್ಪ ಮಧ್ಯೆ ತಿಕ್ಕಾಟ?
ಒಂದು ಕಾಲದ ಆಪ್ತರಾಗಿದ್ದ ಬೊಮ್ಮಾಯಿ, ಯಡಿಯೂರಪ್ಪ ಏಕಾಏಕಿ ದೂರಾದಂತೆ ಕಾಣುತ್ತಿದೆ. ವಿಜಯೇಂದ್ರಗೆ ಪಟ್ಟ ಕಟ್ಟಲು ಬೊಮ್ಮಾಯಿ ವಿರೋಧಿಸುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ವಿಜಯೇಂದ್ರಗೆ ಪಟ್ಟ ಕಟ್ಟಲು ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರಂತೆ. ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ಬೊಮ್ಮಾಯಿ ದೂರು ನೀಡಿದ್ದಾರಂತೆ. ವಿ.ಸುನೀಲ್ ಕುಮಾರ್ ಪರ ಬ್ಯಾಟ್ ಬೀಸುತ್ತಿದ್ದಾರಂತೆ. ಸಾಧ್ಯವಾದರೆ ನನ್ನನ್ನೇ ಪರಿಗಣಿಸಿ ಅಂದ್ರಂತೆ ಬೊಮ್ಮಾಯಿ? ಮಾಜಿ ಸಿಎಂ ನಡೆಯಿಂದ ಯಡಿಯೂರಪ್ಪ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಬಿಜೆಪಿಯಲ್ಲೂ ಬಣ ಪಾಲಿಟಿಕ್ಸ್ ಜೋರಾಗಿದೆ. ಆದರೆ, ಬೊಮ್ಮಾಯಿ ರಂಗಪ್ರವೇಶದಿಂದ ರಾಜ್ಯಧ್ಯಕ್ಷರ ಆಯ್ಕೆಗೆ ರಂಗು ಬಂದಿದೆ.
ನನ್ನದೇ ದರ್ಬಾರ್ ಅಂದ್ರು ವಿಜಯೇಂದ್ರ.!
ಬೀದಿ ರಂಪ, ಕಚ್ಚಾಟದಿಂದ ನಲುಗಿರುವ ರಾಜ್ಯ ಬಿಜೆಪಿಗೆ ಸರ್ಜರಿ ಖಚಿತವಾಗಿದ್ದು, ಜುಲೈ ಅಂತ್ಯದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಹತ್ತಾರು ಬಣಗಳ ಕಾರಣದಿಂದ ರಾಜ್ಯ ಬಿಜೆಪಿ ಸಂಘಟನೆಗೆ ದಿಕ್ಕು ಕಾಣದಂತಾಗಿದೆ. ರಾಜ್ಯಾಧ್ಯಕ್ಷರು ಏನೇ ಹೋರಾಟ ಕೈಗೆತ್ತಿಕೊಂಡರೂ ಭಿನ್ನರ ಬಣ ಅಪಸ್ವರ ತೆಗೆಯುತ್ತದೆ. ಆದರೆ, ಯಾರೇನೇ ಮಾಡಲಿ ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯೋ ವಿಶ್ವಾಸ ಇದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.