Sunday, January 25, 2026
Homeಟಾಪ್ ನ್ಯೂಸ್BIG NEWS: ಚಿಕನ್‌, ಮೊಟ್ಟೆ ಪ್ರಿಯರಿಗೆ ಆಘಾತ.. ಬೆಲೆ ಏರಿಕೆ!

BIG NEWS: ಚಿಕನ್‌, ಮೊಟ್ಟೆ ಪ್ರಿಯರಿಗೆ ಆಘಾತ.. ಬೆಲೆ ಏರಿಕೆ!

ಕೋಲಾರ: ರಾಜ್ಯದ ಹಲವೆಡೆ ಚಳಿ (Cold Weather) ತೀವ್ರಗೊಂಡಿದ್ದು, ಶೀತ ವಾತಾವರಣ ಜನಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕೋಲಾರದಲ್ಲಿ ಚಳಿಯ ಪರಿಣಾಮ ಈಗ ಚಿಕನ್‌ ಮತ್ತು ಮೊಟ್ಟೆ ದರಗಳ ಮೇಲೂ ಬಿದ್ದಿದೆ. ಕೋಲಾರ ಜಿಲ್ಲೆಯಲ್ಲಿ ಚಿಕನ್‌ ಹಾಗೂ ಮೊಟ್ಟೆಯ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಈ ಬೆಲೆ ಏರಿಕೆಯ ಬಿಸಿ ಇದೀಗ ಮಾಂಸಪ್ರಿಯರಿಗೆ ತಟ್ಟಿದೆ.

ಶೀತ ವಾತಾವರಣದ ಕಾರಣ ಕೋಳಿ ಫಾರಂಗಳಲ್ಲಿ ಕೋಳಿಗಳು ಸಮರ್ಪಕವಾಗಿ ಮೊಟ್ಟೆ ಇಡುತ್ತಿಲ್ಲ. ಕಳೆದ ನಾಲ್ಕು–ಐದು ತಿಂಗಳಿಂದ ನಿರಂತರ ಚಳಿ ಇರುವುದರಿಂದ ಮೊಟ್ಟೆ ಉತ್ಪಾದನೆ ಕುಸಿತಗೊಂಡಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಮೊಟ್ಟೆ ಹಾಗೂ ಕೋಳಿ ಮಾಂಸದ ಪೂರೈಕೆ ಕಡಿಮೆಯಾಗಿ ದರ ಏರಿಕೆಯಾಗಿದೆ.

ಹಿಂದೆ 180 ರಿಂದ 200 ರೂಪಾಯಿ ಇದ್ದ ಒಂದು ಕೆಜಿ ಚಿಕನ್ ಬೆಲೆ ಇದೀಗ 280 ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ಈ ದರ ಏರಿಕೆಗೆ ಪ್ರಮುಖ ಕಾರಣ ಶೀತ ವಾತಾವರಣವೇ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಚಳಿ ವಾತಾವರಣದಿಂದ ಕೋಳಿಗಳ ಬೆಳವಣಿಗೆಯ ಮೇಲೂ ಪರಿಣಾಮ ಬಿದ್ದಿದೆ. ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಿದ್ದ ಕೋಳಿ ಸದ್ಯ ಕೇವಲ 1.8 ಕೆಜಿ ತೂಕಕ್ಕೆ ಬರುತ್ತಿದೆ. ಜೊತೆಗೆ, ಒಂದು ತಿಂಗಳಲ್ಲಿ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ 22 ರಿಂದ 24 ಮೊಟ್ಟೆ ಮಾತ್ರ ಇಡುತ್ತಿವೆ. ಸೂರ್ಯನ ಬೆಳಕು ಕಡಿಮೆಯಾಗುವುದು, ಬೆಳಿಗ್ಗೆ ತಡವಾಗಿ ಬೆಳಕಾಗುವುದು ಮತ್ತು ಸಂಜೆ ಬೇಗ ಕತ್ತಲಾಗುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದೀಗ ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಹಕರು ಚಿಕನ್ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವರು 300 ರೂಪಾಯಿ ಚಿಕನ್ ತಿನ್ನುವ ಬದಲು ಮಟನ್ ಆಯ್ಕೆ ಮಾಡುತ್ತಿದ್ದಾರೆ. ಒಟ್ಟಾರೆ, ಚಳಿ ವಾತಾವರಣದಿಂದ ಉಂಟಾದ ಉತ್ಪಾದನಾ ಕುಸಿತವೇ ಕೋಲಾರ ಹಾಗೂ ರಾಜ್ಯದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ ಕೆಲವೊಂದು ಕಡೆ ಇದರಿಂದ ಕೋಳಿ ಫಾರಂ ಮಾಲೀಕರಿಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಮುಂದಿನ 24 ಗಂಟೆ ತೀವ್ರಗೊಳ್ಳಲಿದೆ ಶೀತಗಾಳಿ:

ಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ (Weather) ಇಲಾಖೆ (ಐಎಂಡಿ) ಶನಿವಾರ ಎಚ್ಚರಿಕೆ ನೀಡಿದೆ.

ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಧಾರಣಕ್ಕಿಂತ 3 ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ಸಾಧ್ಯತೆ ಇದ್ದು, ಹಲವೆಡೆ ಮಂಜು ಮುಸುಕಿದ ವಾತಾವರಣ ಇರಲಿದೆ. ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ತೀವ್ರ ಚಳಿ ಗಾಳಿ ಬೀಸಿರುವುದು ಗಮನಕ್ಕೆ ಬಂದಿದೆ ಎಂದು ಐಎಂಡಿ ತಿಳಿಸಿದೆ.

ಮುಂಬರುವ ದಿನಗಳಲ್ಲಿ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಆದರೆ ತುಮಕೂರು, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  ರಾಜ್ಯದಲ್ಲಿ ಮುಂದಿನ 24 ಗಂಟೆ ತೀವ್ರಗೊಳ್ಳಲಿದೆ ಶೀತಗಾಳಿ, ಹವಾಮಾನ ಇಲಾಖೆ ಎಚ್ಚರಿಕೆ!

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!