Saturday, March 15, 2025
Homeಕ್ರೈಂBIG NEWS : ನಟಿ ರನ್ಯಾ ರಾವ್ ಚಿನ್ನದ ಕೇಸಲ್ಲಿ ಸೆಟಲ್​​​ಮೆಂಟ್, ಡಿಕೆಶಿ ವಿರುದ್ಧ ಮುನಿರತ್ನ...

BIG NEWS : ನಟಿ ರನ್ಯಾ ರಾವ್ ಚಿನ್ನದ ಕೇಸಲ್ಲಿ ಸೆಟಲ್​​​ಮೆಂಟ್, ಡಿಕೆಶಿ ವಿರುದ್ಧ ಮುನಿರತ್ನ ಹೊಸ ಬಾಂಬ್!

ಬೆಂಗಳೂರು : ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣಿ ಕೇಸ್ ಇಡೀ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸ್​ ಸಚಿವರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವುದರ ನಡುವೆಯೇ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತಮಗೆ ಅಡ್ಡ ಬಂದವರಿಗೆ ಸಿಎಂ ಕುರ್ಚಿ ಆಕಾಂಕ್ಷಿಯಾಗಿದ್ದವರು ಸೆಟಲ್​​ಮೆಂಟ್​ ಮಾಡ್ತಾರೆ. ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರ ಸಚಿವರ ಸೆಟಲ್​​​ಮೆಂಟ್​​ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪರೋಕ್ಷವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಯೋಗೇಶ್ವರ್ ಅವರದ್ದು ಸೆಟಲ್​​ಮೆಂಟ್ ಆದಂತೆ, ಅದೇ ರೀತಿ ನಂದೂ ಸೆಟಲ್​​ಮೆಂಟ್​ ಆಯ್ತು. ರಮೇಶ್​ ಜಾರಕಿಹೊಳಿ, ರೇವಣ್ಣಂದು ಆಗೋಯ್ತು. ಈಗ ಇನ್ನಿಬ್ಬರ ಸಚಿವರ ಸೆಟಲ್​​ಮೆಂಟ್​ ಆಗುವುದು ಬಾಕಿ ಇದೆ. ಅದು ಸದ್ಯದಲ್ಲೇ ಗೊತ್ತಾಗಲಿದೆ.

ಯಾವ ರೀತಿ ಸೆಟಲ್​ಮೆಂಟ್ ಮಾಡಿದ್ದಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ, ಕಾದು ನೋಡೋಣ. ನನಗೂ ಸೆಟಲ್​​ಮೆಂಟ್ ಆಗಿದೆ ಅಂತಾ ಆದ ಮೇಲೆಯೇ ಅನುಭವಕ್ಕೆ ಬಂತು. ಇನ್ನು ಇನ್ಯಾರಿಗೆ ಆಗೋದಿದೆ ಸೆಟಲ್​​​ಮೆಂಟ್ ಅದು​ ಆಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!