Thursday, April 16, 2026
Homeಟಾಪ್ ನ್ಯೂಸ್BIG NEWS : ದೇಗುಲಗಳಿಗೂ ತಟ್ಟಿದ್ದ ಮಧ್ಯಪ್ರಾಚ್ಯ ಯುದ್ಧದ ಬಿಸಿ - ಅನ್ನ ಪ್ರಸಾದ ಬಂದ್!

BIG NEWS : ದೇಗುಲಗಳಿಗೂ ತಟ್ಟಿದ್ದ ಮಧ್ಯಪ್ರಾಚ್ಯ ಯುದ್ಧದ ಬಿಸಿ – ಅನ್ನ ಪ್ರಸಾದ ಬಂದ್!

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ (Bengaluru ) ವಾಣಿಜ್ಯ ಸಿಲಿಂಡರ್ (Cylinder ) ಅಭಾವ ಹೆಚ್ಚಿದ್ದು, ಇದರ ಎಫೆಕ್ಟ್ ಎಲ್ಲಾ ವಲಯಗಳಿಗೂ ತಟ್ಟಿದೆ.

ಸಿಲಿಕಾನ್ ಸಿಟಿಯ ಪವಿತ್ರ ಧಾರ್ಮಿಕ ಕೇಂದ್ರಗಳ ಮೇಲೂ ಇದೀಗ ಕರಿನೆರಳು ಬೀರಿದೆ. ಸುಪ್ರಸಿದ್ಧ ಬನಶಂಕರಿ (Banashanakari) ದೇಗುಲದ ದಾಸೋಹಕ್ಕೆಇದೀಗ ವಿಘ್ನ ಎದುರಾಗಿದೆ.

ನಗರದ ಸುಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮವಾಗಿ, ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪವಿತ್ರ ಅನ್ನದಾಸೋಹಕ್ಕೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಅಮ್ಮನ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ಪ್ರಸಾದವಿಲ್ಲದೆ ಬರಿಗೈಲಿ ಹಿಂದಿರುಗುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟು ದೇವರ ಪ್ರಸಾದಕ್ಕೂ ಅಡ್ಡಿಯಾಗಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಯಾರಿಸಲು ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನ್ನಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ.

ಇದನ್ನೂ ಓದಿ : ಮುಟ್ಟಾದ ಬಾಲಕಿಯರು ಇಲ್ಲಿ ಬರೋಂಗಿಲ್ಲವಂತೆ – ಗೆದ್ದ ಮೌಢ್ಯ, ಗೆದ್ದಲು ಹಿಡಿದ ವಸತಿಶಾಲೆ! 

ಹೆಚ್ಚಿನ ಸುದ್ದಿ

Change Language »
error: Content is protected !!