Wednesday, February 19, 2025
Homeಟಾಪ್ ನ್ಯೂಸ್BIG NEWS : ಕನ್ನಡ ಕಲಿಯದ ಅನ್ಯ ಭಾಷಿಕರಿಗೆ ಬೆಂಗಳೂರು ಬಂದ್! ಸಂಚಲನ ಮೂಡಿಸಿ ಟ್ವೀಟ್!

BIG NEWS : ಕನ್ನಡ ಕಲಿಯದ ಅನ್ಯ ಭಾಷಿಕರಿಗೆ ಬೆಂಗಳೂರು ಬಂದ್! ಸಂಚಲನ ಮೂಡಿಸಿ ಟ್ವೀಟ್!

ಬೆಂಗಳೂರು : ಕರ್ನಾಟಕಕ್ಕೆ ಬಂದು… ರಾಜಧಾನಿಯಲ್ಲಿ ಆಸರೆ ಪಡೆದು ಹಲವು ಅನ್ಯ ರಾಜ್ಯದ ಜನ ಕನ್ನಡ, ಕನ್ನಡವೆಂದರೆ ಅಸಹ್ಯಪಟ್ಟು ಅವಮಾನಿಸುವ ಪ್ರಕರಣಗಳು ಆಗಾಗ ರಾಜ್ಯದಲ್ಲಿ ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ.

ಹೀಗಾಗಿ ಕನ್ನಡ ಕಲಿಯದ ಉತ್ತರ ಭಾರತದ ಹಾಗೂ ಇತರ ರಾಜ್ಯದವರಿಗೆ ಬೆಂಗಳೂರಿಗೆ ಪ್ರವೇಶವಿಲ್ಲ.. ಬಂದ್ ಎಂಬ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.


ಇಲ್ಲಿನ ಭಾಷೆ.. ಸಂಸ್ಕೃತಿ ಮೇಲೆ ಗೌರವ ಕೊಡದ ಅನ್ಯ ಭಾಷಿಕರಿಗೆ ನಮ್ಮಲ್ಲಿ ಅವಕಾಶವಿಲ್ಲ ಎಂಬ ಸಂದೇಶ ರವಾನಿಸಲಾಗಿದೆ. ಬಬ್ರುವಾಹನ (@Paarmatma ) ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದ್ದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಈ ಪೋಸ್ಟ್ ಅನ್ನು 260ಕ್ಕೂ ಹೆಚ್ಚು ಜನ ರಿಪೋಸ್ಟ್ ಮಾಡಿದ್ದು, 2 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಹಲವರು ಪ್ರತಿಕ್ರಿಯೆ ನೀಡಿದ್ದು, ಕೆಲ ಹೊರ ರಾಜ್ಯದವರು ಎರಡು ತಿಂಗಳಲ್ಲಿ ಕನ್ನಡ ಕಲಿಯಲು ಸಲಹೆ ನೀಡಿ, ಯಾವುದಾದರು ಆಪ್ ಇದ್ದರೆ ತಿಳಿಸಿ ಅಂತಾ ಕಮೆಂಟಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!