Thursday, March 12, 2026
Homeಕ್ರೈಂBIG BREAKING : ಪೌರಾಯುಕ್ತೆಗೆ ಧಮ್ಕಿ! ರಾಜೀವ್​ ಗೌಡ ಕಾಂಗ್ರೆಸ್​ನಿಂದ ಅಮಾನತಿಗೆ ಶಿಫಾರಸು

BIG BREAKING : ಪೌರಾಯುಕ್ತೆಗೆ ಧಮ್ಕಿ! ರಾಜೀವ್​ ಗೌಡ ಕಾಂಗ್ರೆಸ್​ನಿಂದ ಅಮಾನತಿಗೆ ಶಿಫಾರಸು

ಬೆಂಗಳೂರು : ಪೌರಾಯುಕ್ತೆ ಅಮೃತಾಗೌಡ ಅವರಿಗೆ ರಾಜೀವ್​​​​​ಗೌಡ (Rajeev Gowda) ಹಾಕಿದ್ದ ಧಮ್ಕಿ ಕೇಸ್​ನಲ್ಲಿ FIR ಆಗಿ‌ 8 ದಿನ ಕಳೆದರೂ ಇನ್ನೂ‌ ಬಂಧನವಾಗಿಲ್ಲ. ಕಾಂಗ್ರೆಸ್ ಮುಖಂಡನ ಎರಡೂ ಫೋನ್​​ಗಳು ಸ್ವಿಚ್ ಆಫ್ ಆಗಿದ್ದು, ರಾಜೀವ್ ಗೌಡ ರಕ್ಷಣೆಗೆ ಸಚಿವರೊಬ್ಬರು ನಿಂತಿದ್ದಾರಾ ಎಂಬ ಅನುಮಾನ ಮೂಡಿತ್ತು. ಆದರೆ ಪಕ್ಷ ಇದೀಗ ರಾಜೀವ್ ಗೌಡಗೆ ಶಾಕ್ ಕೊಟ್ಟಿದೆ. ಪಕ್ಷದಿಂದಲೇ ಉಚ್ಛಾಟನೆ ಮಾಡಲು ಶಿಫಾರಸು ಮಾಡಲಾಗಿದೆ.

ಆದೇಶ ಪ್ರತಿಯಲ್ಲಿ ಏನಿದೆ?

ರಾಜೀವ್ ಗೌಡ, 2023ರ ವಿಧಾನಸಭೆ ಅಭ್ಯರ್ಥಿ, ಶಿಡ್ಲಘಟ್ಟ ವಿಧಾನಸಭೆ ಇವರು ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಬ್ಯಾನ‌ಗಳನ್ನು ಹಾಕಿರುವುದರ ಬಗ್ಗೆ ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಕರೆ ಮಾಡಿ ಅವರಿಗೆ ವ್ಯಕ್ತಿಗತ ನಿಂದನೆ ಮಾಡಿ, ಅವಾಚ್ಯ ಪದಗಳನ್ನು ಉಪಯೋಗಿಸಿ ಮಾತನಾಡಿರುವ ವಿಷಯವನ್ನು ಗಮನಿಸಿ ಅವರಿಗೆ ದಿನಾಂಕ 15-01- 2026 ರಂದು ಮಾನ್ಯ ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅವರು ಇದುವರೆಗೂ ಕೆಪಿಸಿಸಿ ನೋಟಿಸ್​​ಗೆ ಉತ್ತರ ನೀಡಿರುವುದಿಲ್ಲ.

ಈ ಪಕರಣದಲ್ಲಿ ರಾಜೀವ್ ಗೌಡ ಆಡಿರುವ ಮಾತುಗಳು ಮಾಧ್ಯಮಗಳಲ್ಲಿ ಪಚಾರಗೊಂಡು ಪಕ್ಷಕ್ಕೆ ಹಾಗೂ ಪಕ್ಷದ ಮುಖಂಡರಿಗೆ ತೀವ್ರ ಮುಜುಗರ ಉಂಟಾಗಿರುತ್ತದೆ. ಕೆಪಿಸಿಸಿ ಅಧ್ಯಕ್ಷರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜೀವ್ ಗೌಡ, ಶಿಡ್ಲಘಟ್ಟ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೆಪಿಸಿಸಿ ಶಿಸ್ತು ಸಮಿತಿಗೆ ರವಾನಿಸಲು ಸೂಚನೆ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ತಾವುಗಳು ಈ ಪ್ರಕರಣವನ್ನು ಸೂಕ್ತ ಸಾಕ್ಷಾಧಾರಗಳೊಂದಿಗೆ ಪರಿಶೀಲಿಸಿ, ತಕ್ಷಣ ಇವರನ್ನು ಪಕ್ಷದಿಂದ ಅಮಾನತು ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಲು ಕೆಪಿಸಿಸಿ ಅಧ್ಯಕ್ಷರಿಂದ ನಿರ್ದೇಶಿತಗೊಂಡಿದ್ದೇನೆ ಎಂದು ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್​ರವ್ರು ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಜೀವ್​ ಗೌಡ ಓರ್ವ ನಟೋರಿಯಸ್
ಪೌರಾಯುಕ್ತೆ ಅಮೃತಾಗೆ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್​ ಗೌಡನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ. ಕೇಸ್ ದಾಖಲಾಗ್ತಿದ್ದಂತೆ ರಾಜೀವ್​ ಗೌಡ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಡ್ತಿದ್ದಾರೆ. ಇದೇ ವೇಳೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ರಾಜೀವ್​ ಗೌಡ ಮೇಲಿರುವ ಕೇಸ್​ಗಳ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

16 ಪ್ರಕರಣಗಳಲ್ಲಿ ರಾಜೀವನ ಕೈವಾಡ
ಕೈ ಮುಖಂಡ ರಾಜೀವ್​​ ಗೌಡ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಓರ್ವ ನಟೋರಿಯಸ್​ ಎಂದು ತಿಳಿಸಿದ್ದಾರೆ. ಫೋಕ್ಸೋ, ಮೋಸ, ವಂಚನೆ ಸೇರಿದಂತೆ 16 ಪ್ರಕರಣಗಳಲ್ಲಿ ಭಾಗಿಯಾಗಿರೋ ರಾಜೀವ್​​ ಗೌಡ ಕೈವಾಡವಿದೆ ಎಂದು ಹೇಳಲಾಗ್ತಿದೆ. ಕುಖ್ಯಾತ ಆರೋಪಿ ರಾಜೀವ್ ಗೌಡನ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ‘ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ?’ : ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

ಹೆಚ್ಚಿನ ಸುದ್ದಿ

Change Language »
error: Content is protected !!