ಅಕಾಲಿಕವಾಗಿ ಮೃತಪಟ್ಟ ಸೆಲೆಬ್ರಿಟಿಗಳ ಪಟ್ಟಿಗೆ ಮತ್ತೊಬ್ಬ ನಟಿ ಹೆಸರು ಸೇರ್ಪಡೆಯಾಗಿದೆ. ಭೋಜಪುರಿ ಚಿತ್ರರಂಗದ ನಟಿ ಆಕಾಂಕ್ಷಾ ದುಬೆಯ ಮೃತದೇಹ ವಾರಾಣಸಿಯ ಹೋಟೆಲ್ ಒಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಆಕಾಂಕ್ಷಾ ಮೃತದೇಹ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತಮ್ಮ ಮುಂದಿನ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದ ಈ ನಟಿಗೆ ಕೇವಲ 25 ವರ್ಷವಷ್ಟೇ ಪ್ರಾಯವಾಗಿತ್ತು. ತಮ್ಮ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದ ಇವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಭೋಜಪುರಿ ಚಿತ್ರರಂಗದಲ್ಲಿ ಕನಸಿನ ರಾಣಿಯಂದು ಗುರುತಿಸಿಕೊಂಡಿರುವ ಆಕಾಂಕ್ಷಾ ಐಎಎಸ್ ಅಧಿಕಾರಿ ಆಗಬೇಕೆಂದು ಮುಂಬೈ ಸೇರಿದ್ದರಾದರೂ, ಕೊನೆಗೆ ಅವರು ಸೇರಿದ್ದು ಮಾತ್ರ ಭೋಜಪುರಿ ಚಿತ್ರರಂಗಕ್ಕೆ. ನಟಿ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ.