ನವದೆಹಲಿ : ಭಾರತದ ಸ್ಟಾರ್ ಕುಸ್ತಿಪಟು , ಒಲಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾರನ್ನ 4 ವರ್ಷ ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಮಂಗಳವಾರ ಈ ಆದೇಶ ಹೊರಡಿಸಿದೆ.
ಡೋಪ್ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಏ.23ರಂದು ನಾಡಾ ಬಜರಂಗ್‌ರನ್ನು ಅಮಾನತುಗೊಳಿಸಿತ್ತು.ಬಜರಂಗ್ ಪುನಿಯಾ ಯಾವುದೇ ಸ್ಪರ್ಧಾತ್ಮಕ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಹಾಗಿಲ್ಲ. ಹಾಗೆಯೇ ವಿದೇಶದಲ್ಲಿ ಕೋಚಿಂಗ್ ವೃತ್ತಿಯನ್ನ ಸಹ ಮಾಡುವಂತಿಲ್ಲ ಎಂದು ನಾಡಾ ಸೂಚಿಸಿದೆ.
ನಾಡಾ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಹಾಗು ಕುಸ್ತಿಪಟುವಿನ ಬದ್ಧತೆ ಪ್ರಶ್ನೆ ಗೆ ಅರ್ಹವಾಗಿದೆ. ಡೋಪಿಂಗ್ ಟೆಸ್ಟ್ ಮಾದರಿ ನೀಡುವಲ್ಲಿ ಪುನಿಯಾ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ನಾಡಾ ಅಭಿಪ್ರಾಯ ಪಟ್ಟಿದೆ. ಪರಿಣಾಮ 4 ವರ್ಷ ನಿಷೇಧ ಹೇರಲಾಗಿದೆ.
ಇತ್ತೀಚೆಗಷ್ಟೇ ವಿನೇಶ್ ಫೋಗಟ್ ಜತೆ ಕಾಂಗ್ರೆಸ್ ಸೇರಿದ್ದ ಬಜರಂಗ್ ಪುನಿಯಾ ಆಲ್ ಇಂಡಿಯಾ ಕಿಸಾನ್ ಕಾಂಗ್ರೆಸ್ ನೇತೃತ್ವ ವಹಿಸಿದ್ದರು.