ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ (Biklu Shiva ) ಕೊಲೆ (Crime ) ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ ಗೆ (Bhairathi Basavaraj )ಇವತ್ತು ಮಹತ್ವದ ದಿನವಾಗಿದೆ.
ಶಾಸಕ ಬೈರತಿ ಬಸವರಾಜ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ವಾದ ಪ್ರತಿವಾದ ಆಲಿಸಿರೋ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡುವ ಸಾಧ್ಯತೆ ಇದೆ.
ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಏಳು ತಿಂಗಳಿನಿಂದ ಕಾನೂನು ಹೋರಾಟದ ಮೂಲಕ ಬಂಧನ ಪ್ರಕ್ರಿಯೆಯಿಂದ ರಕ್ಷಣೆ ಪಡೆಯುತ್ತಿದ್ದ ಬೈರತಿ ಬಸವರಾಜು, ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸುತ್ತಿದ್ದಂತೆ ಅಹಮದಾಬಾದ್‌ಗೆ ಪರಾರಿಯಾಗಿದ್ದರು. ಸುಪ್ರೀಂಕೋರ್ಟ್ ಕೂಡ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಬೆಂಗಳೂರಿಗೆ ವಾಪಸ್ಸಾಗಿದ್ದ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಇನ್ನು, ಪರಪ್ಪನ ಅಗ್ರಹಾರ್ ಜೈಲು ಪಾಲಾಗಿರೋ ಭೈರತಿ ವಿಚಾರಣೆಗೆ ಸಹಕರಿಸಿಲ್ಲ ಎನ್ನಲಾಗಿದೆ. ಈಗಾಗಲೇ ಸಿಐಡಿ ಅಕಾರಿಗಳು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದು, ಅವುಗಳಲ್ಲಿನ ದತ್ತಾಂಶವನ್ನು ರಿಟ್ರೀವ್ ಮಾಡಲು FSL ಗೆ ಕಳುಹಿಸಲಾಗಿದೆ ಎನ್ನಲಾಗಿದೆ.
2025 ರ ಜು.15ರಂದು ರಾತ್ರಿ ಭಾರತಿನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಬಿಕ್ಲುಶಿವ ಕೊಲೆ ನಡೆದಿತ್ತು. ಈ ಕೃತ್ಯದಲ್ಲಿ ರೌಡಿ ಜಗ್ಗ ಅಲಿಯಾಸ್ ಜಗ್ಗ, ವಕೀಲ ಅಜಿತ್ ಸೇರಿದಂತೆ 20 ಮಂದಿ ಆರೋಪಿಗಳು ಭಾಗಿಯಾಗಿದ್ದರು. ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ಅವರನ್ನು ಐದನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಕೃತ್ಯದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಅನುಮಾನವಿದ್ದು, ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಇದ್ದರೂ ಅಪರಾಧ – ಹೈಕೋರ್ಟ್ ಮಹತ್ವದ ತೀರ್ಪು