Wednesday, August 19, 2026
Homeಟಾಪ್ ನ್ಯೂಸ್BREAKFAST RECIPE: ತೂಕ ಇಳಿಕೆ, ಮಧುಮೇಹಕ್ಕೆ ಬೆಸ್ಟ್ ಉಪಹಾರ - ಇಲ್ಲಿದೆ 'ಓಟ್ಸ್-ಹೆಸರುಬೇಳೆ ಖಿಚಡಿ' ರೆಸಿಪಿ

BREAKFAST RECIPE: ತೂಕ ಇಳಿಕೆ, ಮಧುಮೇಹಕ್ಕೆ ಬೆಸ್ಟ್ ಉಪಹಾರ – ಇಲ್ಲಿದೆ ‘ಓಟ್ಸ್-ಹೆಸರುಬೇಳೆ ಖಿಚಡಿ’ ರೆಸಿಪಿ

ಖಿಚಡಿ ಪ್ರತಿಯೊಬ್ಬರಿಗೂ ಇಷ್ಟವಾಗುವ ಅತ್ಯಂತ ಪೌಷ್ಟಿಕ ಮತ್ತು ಸರಳ ಉಪಹಾರ (Breakfast Recipe). ಪ್ರತಿದಿನ ಒಂದೇ ರೀತಿಯ ಅಕ್ಕಿ ಖಿಚಡಿ ತಿಂದಿದ್ದರೆ, ನಿಮಗಾಗಿ ಇಲ್ಲಿದೆ ಒಂದು ವಿಭಿನ್ನ ಹಾಗೂ ಆರೋಗ್ಯಕರ ಖಿಚಡಿ ಪಾಕವಿಧಾನ. ಓಟ್ಸ್ ಮತ್ತು ಹೆಸರುಬೇಳೆ ಖಿಚಡಿ (Oats and Moong Dal Khichdi) ದೇಹಕ್ಕೆ ಅಗತ್ಯವಿರುವ ನಾರಿನಂಶ ಮತ್ತು ಪ್ರೋಟೀನ್ ನೀಡಲು ಅತ್ಯುತ್ತಮವಾದ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು:
* ಓಟ್ಸ್ – 1 ಕಪ್
* ಹೆಸರುಬೇಳೆ – ಕಾಲು ಕಪ್
* ಹೆಚ್ಚಿದ ಕ್ಯಾರೆಟ್ – ಕಾಲು ಕಪ್
* ಹೆಚ್ಚಿದ ಬೀನ್ಸ್ – ಕಾಲು ಕಪ್
* ಹೆಚ್ಚಿದ ಈರುಳ್ಳಿ ಕಾಲು ಕಪ್
* ಎಣ್ಣೆ – 1 ಚಮಚ
* ಜೀರಿಗೆ – ಅರ್ಧ ಚಮಚ
* ಇಂಗು – ಕಾಲು ಚಮಚ
* ಸೀಳಿದ ಹಸಿಮೆಣಸಿನಕಾಯಿ – 2
* ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
* ಖಾರದ ಪುಡಿ – ಅರ್ಧ ಚಮಚ
* ಅರಿಶಿನ ಪುಡಿ – ಕಾಲು ಚಮಚ
* ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿಯಿರಿ.
* ಒಂದು ಪ್ರೆಶರ್ ಕುಕ್ಕರ್ ಅಥವಾ ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಜೀರಿಗೆ ಮತ್ತು ಇಂಗು ಹಾಕಿ ಒಗ್ಗರಣೆ ಕೊಡಿ.
* ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಕ್ಯಾರೆಟ್ ಹಾಗೂ ಬೀನ್ಸ್ ಸೇರಿಸಿ 2 ನಿಮಿಷ ಬೇಯಿಸಿ.
* ಅರಿಶಿನ, ಖಾರದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ.
* ತೊಳೆದ ಹೆಸರುಬೇಳೆ, ಓಟ್ಸ್ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ. ಕುಕ್ಕರ್ ಮುಚ್ಚಳ ಮುಚ್ಚಿ 2-3 ವಿಸಿಲ್ ಕೂಗಿಸಿದರೆ ಬಿಸಿಬಿಸಿಯಾದ ಓಟ್ಸ್ ಖಿಚಡಿ ಸಿದ್ಧ.
* ಈ ಖಿಚಡಿಯನ್ನು ಮೊಸರು ಅಥವಾ ರಾಯತದೊಂದಿಗೆ ಬಿಸಿಯಾಗಿ ಸವಿಯಬಹುದು. ತೂಕ ಇಳಿಸಲು ಬಯಸುವವರಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದು ಅತ್ಯುತ್ತಮ ಆಹಾರವಾಗಿದೆ.

ಇದನ್ನೂ ಓದಿ : ಮನೆಯಲ್ಲೇ ತಯಾರಿಸಿ ಕೇರಳ ಶೈಲಿಯ ರುಚಿಕರ ‘ಕಲ್ಲಪ್ಪಂ’

ಹೆಚ್ಚಿನ ಸುದ್ದಿ

Change Language »
error: Content is protected !!