ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆ ಎನ್ನುವುದು ಬಹಳ ಸಾಮಾನ್ಯ. ಟ್ರಾಫಿಕ್ ಇಲ್ಲದಿದ್ದರೆ ಅದು ಎಲ್ಲರ ಆಶ್ಚರ್ಯಕ್ಕೂ ಕಾರಣವಾಗುತ್ತದೆ. ಆದರೆ ಈಗ ಸದ್ಯ ವೈರಲ್ (Viral) ಆಗುತ್ತಿರುವುದು ಹಾರ್ಟ್ ಸಿಂಬಲ್ ಸಿಗ್ನಲ್.
ಕೆಂಪು ಸಿಗ್ನಲ್ ಫೋಟೋ ವೈರಲ್
ಟ್ರಾಫಿಕ್ ಎನ್ನುವುದು ತುಂಬಾ ದೊಡ್ಡ ಸಮಸ್ಯೆ. ಇದು ಅನೇಕ ಬಾರಿ ಬಹಳಷ್ಟು ಜನರಿಗೆ ಕಷ್ಟಗಳನ್ನ ಜಾಸ್ತಿ ಮಾಡಿದೆ. ಅನೇಕರು ಕೆಲಸಕ್ಕೆ ತಡವಾಗಿ ಹೋಗಿದ್ದರೆ, ಇನ್ನೂ ಕೆಲವರ ಮದುವೆ ಮುಹೂರ್ತ ಸಹ ಮೀರಿರುವ ಘಟನೆಗಳು ಇದೆ. ಬಹಳಷ್ಟು ಬಾರಿ ಈ ಸಿಗ್ನಲ್‌ಗಳಲ್ಲಿ ನಿಂತಿರುವ ಜನರಿಗೆ ಬಹಳ ವಿಶೇಷವಾದ ಘಟನೆಗಳನ್ನ ನೋಡುವ ಅವಕಾಶಗಳು ಸಹ ಸಿಗಿತ್ತದೆ. ಈ ವಿಚಾರವಾಗಿ ಹಿಂದೆ ಒಂದು ಸಿನಿಮಾ ಸಹ ಬಂದಿತ್ತು. ಆದರೆ ಈಗ ಬೆಂಗಳೂರಿನ ನಿವಾಸಿಯೊಬ್ಬರು ಹೃದಯಾಕಾರದ ಕೆಂಪು ಸಿಗ್ನಲ್ ಇರುವ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಅದು ಈಗ ಸಖತ್ ವೈರಲ್ ಆಗುತ್ತಿದೆ.
ಹೌದು, ಈ ವಿಶೇಷವಾದ ಸಿಗ್ನಲ್ ಬೆಂಗಳೂರಿನ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದ್ದು, ಇದನ್ನ ಶೇರ್ ಮಾಡಿಕೊಂಡಿರುವವರು ಮೊದಲ ಬಾರಿ ಇದನ್ನ ನೋಡಿದಾಗ ನನಗೆ ಭ್ರಾಂತಿ ಆಗಿದೆ ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಸ್ನೇಹಿತ ದುಬೈಗೆ ಹೋದರೂ ನಾನಿನ್ನೂ ಮನೆ ತಲುಪಿಲ್ಲ – ಬೆಂಗಳೂರು ಟ್ರಾಫಿಕ್ ನ ದಾರುಣ ಕಥೆಯಿದು.! VIDEO
ಏನಿದೆ ಪೋಸ್ಟ್‌ನಲ್ಲಿ?
ಬೆಂಗಳೂರಿನಲ್ಲಿ ಯಾರಾದರೂ ಈ ಹೃದಯ ಆಕಾರದ ಸಿಗ್ನಲ್‌ಗಳನ್ನು ನೋಡಿದ್ದೀರಾ? ಎಂದು ಅವರು ಪ್ರಶ್ನೆ ಮಾಡಿದ್ದು, ನಿಜಕ್ಕೂ ಬೆಂಗಳೂರು ನಗರದ ಜೀವಂತಿಕೆಯನ್ನ ಹೆಚ್ಚು ಮಾಡಲು ಇದು ಬಹಳ ಒಳ್ಕೆಯ ದಾರಿ ಆಗಿದೆ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ, ದಿನನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಮಯ ಕಳೆಯುವವರನ್ನ ಇದು ಆಕರ್ಷಿಸುತ್ತಿದ್ದು, ನಿಜಕ್ಕೂ ಇದು ತುಂಬಾ ಅರ್ಥವಾಗಿದೆ ಎಂದು ಅನೇಕ ಜನರು ಕಾಮೇಂಟ್ ಮಾಡುತ್ತಿದ್ದಾರೆ.
Seen these heart-shaped signals in Bangalore? Nice little touch to make the city feel a little more human pic.twitter.com/ugolCUx7mw
— Irshad Ahmed (@irshaddahmed) October 26, 2025
ದಂಡದಿಂದ ಪಾರಾಗಲು ಹೆಲ್ಮೆಟ್ ಬದಲು ಕಡಾಯಿ ಧರಿಸಿದ ಭೂಪ
ಡ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎನ್ನುವ ನಿಯಮ ಇದೆ. ಆದರೆ ಅನೇಕ ಜನರು ಇದನ್ನ ಫಾಲೋ ಮಾಡುತ್ತಿಲ್ಲ. ಬೆಂಗಳೂರು ಮಹಾನಗರದಲ್ಲಿ ಹಿಂಬದಿ ಸವಾರ ಸಹ ಹೆಲ್ಮೆಟ್ ಧರಿಸುವುದನ್ನ ಕಡ್ಡಾಯ ಮಾಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ದಂಡವನ್ನ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಬಹಳ ವಿಚಿತ್ರವಾದ ಕೆಲಸ ಮಾಡಿದ್ದು, ಅದರ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ತಲೆಯ ಮೇಲೆ ಕಡಾಯಿ
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಕಡಾಯಿ ಇಟ್ಟುಕೊಂಡು ಹಿಂದಿನ ಸೀಟ್‌ನಲ್ಲಿ ಕುಳಿತುಕೊಂಡಿರುವ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಾಹಿತಿಗಳ ಪ್ರಕಾರ, ಹೆಲ್ಮೆಟ್ ಧರಿಸದೇ ಸಂಚಾರ ಮಾಡಿದರೆ ಬೀಳುವ ಭಾರೀ ದಂಡವನ್ನ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ರೂಪೇನ ಅಗ್ರಹಾರ ಬಳಿ ಬೈಕ್ ಟ್ರಾಫಿಕ್ ಮೂಲಕ ಹೋಗುವಾಗ ವ್ಯಕ್ತಿಯೊಬ್ಬರ ತಲೆಯ ಮೇಲೆ ಅಡುಗೆ ಪಾತ್ರೆಯೊಂದು ಕಾಣಿಸಿಕೊಂಡಿದೆ. ಇದನ್ನ ಹಿಂದೆ ಪ್ರಯಾಣ ಮಾಡುತ್ತಿದ್ದ ಮತ್ತೊಂದು ವಾಹನ ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದಾರೆ. ಹೆಲ್ಮೆಟ್ ಧರಿಸಿಕೊಳ್ಳಬೇಕಿದ್ದ ಜಾಗದಲ್ಲಿ ಆತ ಕಡಾಯಿ ಹಾಕಿಕೊಂಡಿದ್ದ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.