Monday, June 15, 2026
Homeಟಾಪ್ ನ್ಯೂಸ್BENGALURU : ಧಾರಾಕಾರ ಮಳೆಗೆ ಕೆ.ಆರ್.ಪುರ ಜನಜೀವನ ತತ್ತರ, ಶಾಸಕ ಬೈರತಿ ವಿರುದ್ಧ ಜನಾಕ್ರೋಶ- VIDEO

BENGALURU : ಧಾರಾಕಾರ ಮಳೆಗೆ ಕೆ.ಆರ್.ಪುರ ಜನಜೀವನ ತತ್ತರ, ಶಾಸಕ ಬೈರತಿ ವಿರುದ್ಧ ಜನಾಕ್ರೋಶ- VIDEO

ಬೆಂಗಳೂರು: ನಗರದ (Bengaluru) ಹೊರಮಾವು ಮತ್ತು ರಾಮಮೂರ್ತಿನಗರದ ನಿವಾಸಿಗಳು ಭಾರಿ ಮಳೆಯಿಂದಾಗಿ (Rain) ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿನ ಎಸ್ ಎಲ್ ವಿ ವಜ್ರ ಅಪಾರ್ಟ್‌ಮೆಂಟ್‌ (Apartment) ಆವರಣದಲ್ಲಿ ಮೂರು ಅಡಿಗೂ ಅಧಿಕ ನೀರು ನಿಂತಿದ್ದು, ಐಷಾರಾಮಿ ಕಾರುಗಳು ಮುಳುಗಡೆಯಾಗಿವೆ. ಆದ್ರೆ ಯಾವುದೇ ತುರ್ತು ನೆರವು ಸಿಗದೆ ಜನ ಹೈರಾಣಾಗಿದ್ದಾರೆ. ಮತ್ತೊಂದೆಡೆ, ರಾಜಕಾಲುವೆ ಪಕ್ಕದಲ್ಲಿರುವ ಅಂಬೇಡ್ಕರ್ ನಗರದ ನೂರಾರು ಸ್ಲಂ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದು, ಬದುಕು ದುಸ್ತರವಾಗಿದೆ.

ಈ ದುಸ್ಥಿತಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ನಿವಾಸಿಗಳ ಮನೆಗಳ ಅಭಿವೃದ್ಧಿಗೆ ಮತ್ತು ಮರುನಿರ್ಮಾಣಕ್ಕಾಗಿ ಎರಡೆರಡು ಬಾರಿ ವಿಶೇಷ ಅನುದಾನ ನೀಡಿದ್ದರು. ಆದಾಗ್ಯೂ, ಬಿಬಿಎಂಪಿ ಮತ್ತು ಶಾಸಕ ಬೈರತಿ ಬಸವರಾಜ್ ಅವರ ಜಾಣ ಕುರುಡುತನದಿಂದಾಗಿ ಸಮಸ್ಯೆ ಬಗೆಹರಿದಿಲ್ಲಎಂದಿದ್ದಾರೆ.

ಇದನ್ನೂ ಓದಿ : ಚುರುಕುಗೊಂಡ ಪೂರ್ವ ಮುಂಗಾರು – ಇಂದು 22 ಜಿಲ್ಲೆಗಳಿಗೆ ಮಳೆ ಅಲರ್ಟ್!

ಅಂದು ಸಚಿವರಾಗಿದ್ದರು, ಇಂದು ಶಾಸಕರಾಗಿದ್ದರೂ ನಮ್ಮ ಕಷ್ಟ ತೀರಲಿಲ್ಲ; ಇವರಿಗೆ ವೋಟ್ ಹಾಕಿ ತಪ್ಪು ಮಾಡಿದೆವು” ಎಂದು ಆಕ್ರೋಶಗೊಂಡಿರುವ ಸಾರ್ವಜನಿಕರು, ಬಿಡುಗಡೆಯಾದ ಸರ್ಕಾರಿ ಹಣ ಎಲ್ಲಿಗೆ ಹೋಯಿತು ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!