ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಮಳೆ ಮತ್ತು ಟ್ರಾಫಿಕ್ ಸಮಸ್ಯೆ ಸಾರ್ವಜನಿಕರನ್ನು ಹೇಗೆ ಹೈರಾಣಾಗಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭಾರೀ ಮಳೆಯ ಸಮಯದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಕೇವಲ 15 ಕಿಲೋಮೀಟರ್ ಪ್ರಯಾಣಕ್ಕಾಗಿ ಬರೋಬ್ಬರಿ 1,200 ರೂಪಾಯಿ ಆಟೋ ಬಾಡಿಗೆ (Auto Fare) ಪಾವತಿಸಿರುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ಚರ್ಚೆಗೆ ಕಾರಣವಾಗಿದೆ.
ಹೌದು, ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಸಾನ್ಯಾ ಸಿಂಗ್ ಈ ಕುರಿತು ವಿಡಿಯೋ ಹಂಚಿಕೊಂಡಿದ್ದು, ನಗರದ ಪೀಕ್ ಅವರ್ ಟ್ರಾಫಿಕ್ ಮತ್ತು ಮಳೆಯ ನಡುವಿನ ಪ್ರಯಾಣದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತೆಯೊಬ್ಬರು 15 ಕಿ.ಮೀ ಕ್ರಮಿಸಲು ಆಟೋ ಚಾಲಕನಿಗೆ 1,200 ರೂಪಾಯಿ ನೀಡಿದ್ದಾರೆ. ಈ ಹಣದಲ್ಲಿ ಎರಡು ಬಾರಿ ಮನೆಯ ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಷ್ಟೊಂದು ಹಣ ನೀಡಿದರೂ ಆಕೆ ಮನೆ ತಲುಪಲು 3 ಗಂಟೆ ಸಮಯ ಹಿಡಿದಿದೆ ಎಂದು ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಇನ್ನು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಬೆಂಗಳೂರಿನ ಮಳೆ ದುರ್ಬಲರಿಗಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಮಳೆ ಬಂದ ತಕ್ಷಣ ಪ್ರತಿಯೊಂದು ದರವೂ ಪ್ರೀಮಿಯಂ ಆಗಿ ಬದಲಾಗುತ್ತದೆ” ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ. “15 ಕಿ.ಮೀ ಕ್ರಮಿಸಲು 3 ಗಂಟೆ ಬೇಕಾಯಿತು ಎನ್ನುವುದೇ ಇಲ್ಲಿನ ಅಸಲಿ ಸಮಸ್ಯೆ, ಬಾಡಿಗೆಗಿಂತ ಟ್ರಾಫಿಕ್ ಪರಿಸ್ಥಿತಿ ಕೆಟ್ಟದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
View this post on Instagram
ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಕಿಡಿಗೇಡಿಗಳ ಪುಂಡಾಟ, ಸೀಟ್ಗಳನ್ನು ಹರಿದು ವಿಕೃತಿ- VIDEO