Wednesday, November 13, 2024
Homeಟಾಪ್ ನ್ಯೂಸ್ʼಮಹಿಳಾ ಸಿಬ್ಬಂದಿಗಳನ್ನು ಮನೆಗೆ ಕರೀತಾರೆʼ: ಬೆಂಗಳೂರಿನ ಇನ್ಸ್ಪೆಕ್ಟರ್‌ ವಿರುದ್ಧ ರಾಷ್ಟ್ರಪತಿಗೆ ದೂರು

ʼಮಹಿಳಾ ಸಿಬ್ಬಂದಿಗಳನ್ನು ಮನೆಗೆ ಕರೀತಾರೆʼ: ಬೆಂಗಳೂರಿನ ಇನ್ಸ್ಪೆಕ್ಟರ್‌ ವಿರುದ್ಧ ರಾಷ್ಟ್ರಪತಿಗೆ ದೂರು

ತೀವ್ರ ಒತ್ತಡ ಇರುವ ಕೆಲಸಗಳಲ್ಲಿ ಒಂದಾದ ಪೊಲೀಸ್‌ ಕೆಲಸಗಳಲ್ಲಿ ಮೇಲಾಧಿಕಾರಿಗಳ ಕಿರುಕುಳ ಬಗ್ಗೆ ಪದೇ ಪದೇ ವರದಿಯಾಗುತ್ತಲೇ ಇರುತ್ತದೆ. ಇದೀಗ ಅಂಹತದ್ದೇ ಪ್ರಕರಣದಲ್ಲಿ ಬೆಂಗಳೂರಿನ ಪೊಲೀಸರು ಡೈರೆಕ್ಟ್‌ ರಾಷ್ಟ್ರಪತಿಗೆ ಪತ್ರ ಬರೆದಿದ್ದು, ಮೇಲಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದಾರೆ.

ಈ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಪೊಲೀಸ್‌ ಇಲಾಖೆಗೆ ಮುಜುಗರ ತಂದೊಡ್ಡಿದೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ತಮ್ಮ ಇನ್ಸ್ಪೆಕ್ಟರ್‌ ಶರಣಗೌಡರ ವಿರುದ್ಧ ಆರೋಪ ಮಾಡಿದ್ದು, ಹಣ ಸಂಗ್ರಹಿಸಿ ತನಗೆ ಕೊಡುವಂತೆ ತಾಕೀತು ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಲಂಚ ನೀಡಿದವರಿಗೆ ಮಾತ್ರ ರಜೆ ಸಿಗುತ್ತಿದೆ, ಯಾರೇ ಭ್ರಷ್ಟಾಚಾರ ಮಾಡಿ ಹಣ ಇನ್ಸ್ಪೆಕಟ್ಟರ್‌ ಗೆ ಕೊಟ್ರೆ ಅವರಿಗೆ ರಜೆ ಸೇರಿದಂತೆ ಎಲ್ಲಾ ಸೌಲಭ್ಯ ಕೊಡ್ತಾರೆ. ಋತುಚಕ್ರದ ಸಮಯದಲ್ಲಿ ಮಹಿಳಾ ಸಿಬ್ಬಂದಿ ರಜೆ ಕೇಳಿದ್ರೆ, ರಾಜಿನಾಮೆ ನೀಡಿ ಮನೆಗೆ ಹೋಗಿ ಎಂದು ಹೇಳುತ್ತಾರೆ. ಅಲ್ಲದೆ, ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಅವರು ಮನೆಗೆ ಬರುವಂತೆ ಆಹ್ವಾನಿಸುತ್ತಾರೆ. ಇವರ ಕಿರುಕುಳಕ್ಕೆ ಈಗಾಗಲೇ ಒಬ್ಬರು ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅದೂ ಅಲ್ಲದೆ, ಸುಲಿಗೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಯುವಕನಲ್ಲಿ 3 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಆತ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ, ಪ್ರಕರಣವನ್ನು ಹದಿನೈದು ಲಕ್ಷ ಖರ್ಚು ಮಾಡಿ ಮುಚ್ಚಿ ಹಾಕಿದ್ದಾರೆ ಎಂದು ದೂರಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!