Saturday, January 25, 2025
Homeಬೆಂಗಳೂರುಇಂದು ತಡರಾತ್ರಿ ನಡೆಯಲಿದೆ ಆಕರ್ಷಕ ಹಸಿಕರಗ

ಇಂದು ತಡರಾತ್ರಿ ನಡೆಯಲಿದೆ ಆಕರ್ಷಕ ಹಸಿಕರಗ

ವಿಶ್ವವಿಖ್ಯಾತ ಧರ್ಮರಾಯನ ಕರಗ ಸಂಭ್ರಮಾಚರಣೆ ಕಳೆದ ನಾಲ್ಕುದಿನಗಳಿಂದ ಪ್ರಾರಂಭಗೊಂಡಿದೆ. ಉತ್ಸವದ ಬಹುಮುಖ್ಯ ಆಚರಣೆಗಳಲ್ಲೊಂದಾದ “ಹಸಿ ಕರಗ” ಮಂಗಳವಾರ ತಡರಾತ್ರಿಯಿಂದ ಬುಧವಾರ ಮುಂಜಾನೆಯವರಗೆ ನಡೆಯಲಿದೆ. ಸಾವಿರಾರು ಭಕ್ತರು ಮಂಗಳವಾರ ರಾತ್ರಿಯಿಂದಲೇ ಚಿಕ್ಕಪೇಟೆಯ ಧರ್ಮರಾಯನ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಶಕ್ತಿದೇವತೆ ದ್ರೌಪದಿ ದರ್ಶನ ಪಡೆಯಲಿದ್ದಾರೆ.
ಏ. 6 ರ ಚೈತ್ರ ಪೂರ್ಣಿಮೆಯಂದು ಹೂವಿನ ಕರಗ ಹೊರುವ ಧರ್ಮರಾಯಸ್ವಾಮಿ ದೇಗುಲದ ಅರ್ಚಕರು ಇಂದು ಹಸಿಕರಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಡಿಯಿಂದ ಮುಡಿಯವರೆಗೆ ಸ್ತ್ರೀವೇಷ ಧರಿಸಿ ಕಂಕುಳಲ್ಲಿ ಪೂಜಾ ಮೂರ್ತಿಯನ್ನು ಇರಿಸಿಕೊಂಡು ಒಂದು ಕೈಯಲ್ಲಿ ಬಿಚ್ಚುಗತ್ತಿಯನ್ನು ಹಿಡಿದು ನರ್ತನ ಮಾಡುತ್ತಾ ಸಾಗುವ ಮನಮೋಹಕ ದೃಶ್ಯ ನೋಡಲು ಜನರು ಕಿಕ್ಕಿರಿದು ನೆರೆಯುತ್ತಾರೆ.
ಎಂಟುನೂರು ವರ್ಷ ಇತಿಹಾಸವಿರುವ ಕರಗ ಮಹೋತ್ಸವ ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದಾಗಿ ಅದ್ದೂರಿಯಾಗಿ ನಡೆದಿರಲಿಲ್ಲ.

ಹೆಚ್ಚಿನ ಸುದ್ದಿ

error: Content is protected !!