Thursday, March 27, 2025
Homeಬೆಂಗಳೂರುಬೆಂಗಳೂರು ಸಿನಿಮಾ ಉತ್ಸವಕ್ಕೆ ಭರ್ಜರಿ ಚಾಲನೆ

ಬೆಂಗಳೂರು ಸಿನಿಮಾ ಉತ್ಸವಕ್ಕೆ ಭರ್ಜರಿ ಚಾಲನೆ

14ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಆರ್.ಅಶೋಕ್, ಸಾಹಿತಿ ರಾಜ್ಯಸಭಾ ಸದಸ್ಯ ವಿಜಯೇಂದ್ರ ಪ್ರಸಾದ್, ಹಿರಿಯ ನಿರ್ದೇಶಕ ಗೋವಿಂದ ನಿಹಲಾನಿ, ನಟಿ ಸಪ್ತಮಿ ಗೌಡ, ನಟಿ ಹರ್ಷಿಕಾ ಪೂಣಚ್ಚ, ನಟ ಅಭಿಷೇಕ್ ಅಂಬರೀಷ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇಂದಿನಿಂದ ಮಾ. 30 ರವರೆಗೆ ನಡೆಯಲಿರುವ ಫಿಲ್ಮ್ ಫೆಸ್ಟ್‍ನಲ್ಲಿ ಭಾರತ ಉಪಖಂಡ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶಿತಗೊಳ್ಳಲಿದೆ. ಶ್ರೀಲಂಕಾ ,ಕೊರಿಯಾ, ಇಸ್ರೇಲ್ ಸೇರಿದಂತೆ ಹಲವು ದೇಶಗಳ ಕಲಾತ್ಮಕ ಚಿತ್ರಗಳ ಚಿತ್ರ ರಸಿಕರ ಮನಸೂರೆಗೊಳ್ಳಲಿವೆ.
ಒರಾಯನ್ ಮಾಲ್, ಸಿನಿಮಾ ಕಲಾವಿದರ ಸಂಘ-ಚಾಮರಾಜಪೇಟೆ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.
ಕನ್ನಡದ ಖ್ಯಾತ ಹಾಸ್ಯನಟ ನರಸಿಂಹರಾಜು, ಖ್ಯಾತ ಸಿನಿಮಾಟೋಗ್ರಫಿ ಕಲಾವಿದ ವಿ.ಕೆ.ಮೂರ್ತಿ ಸ್ಮರಣೆಯಲ್ಲಿ ವಿಶೇಷ ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಈ ವೇಳೆ ಮಾತನಾಡಿ, ಭಾರತದಲ್ಲೇ ಚಲನಚಿತ್ರೋತ್ಸವ ಆಚರಿಸಲು ಬೆಂಗಳೂರು ಸೂಕ್ತ ನಗರವಾಗಿದೆ. ಸಿನಿಮಾ ನಮ್ಮೆಲ್ಲರ ಜೀವನಶೈಲಿಯ ಭಾಗವಾಗಿದ್ದು, ಮುಬರುವ ದಿನಗಳಲ್ಲಿ ಸಿನಿಮಾ ಕ್ಷೇತ್ರ ಮತ್ತಷ್ಟು ಪ್ರಾಮುಖ್ಯತೆ ಗಳಿಸಲಿದೆ ಎಂದಿದ್ದಾರೆ.
ಕನ್ನಡದ ವಿರಾಟಪುರದ ವಿರಾಗಿ, ಇನ್, ಸಿಗ್ನಲ್ ಮ್ಯಾನ್ ಸೇರಿದಂತೆ 22 ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!