ಬೆಂಗಳೂರಿನ ಪ್ರಖ್ಯಾತ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಇಂದಿನಿಂದ ಪ್ರಾರಂಭವಾಗಲಿದೆ. ಮಾ. 30 ರವರೆಗೆ ಫಿಲಂ ಫೆಸ್ಟ್ ನಡೆಯಲಿದ್ದು ದೇಶವಿದೇಶಗಳ ಸುಪ್ರಸಿದ್ಧ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಿನಿಮಾ ಅಭಿಮಾನಿಗಳ ಜೊತೆ ನಿರ್ದೇಶಕರು, ನಟರು, ತಂತ್ರಜ್ಞರು ಈ ಬಾರಿಯ ಸಿನಿ ಹಬ್ಬದ ವಿಶೇಷ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಫಿಲಂ ಫೆಸ್ಟ್ ನಲ್ಲಿ ಸುಮಾರು ಮುನ್ನೂರು ಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ. ಕನ್ನಡ, ದಕ್ಷಿಣ ಭಾರತೀಯ ಸಿನಿಮಾಗಳು, ಏಷ್ಯಾ ಸಿನಿಮಾಗಳು ಹಾಗೂ ವಿದೇಶಿ ಸಿನಿಮಾಗಳು ಎಂಬ ಪ್ರಾಕಾರದಲ್ಲಿ ಸಿನಿರಸಿಕರು ಮನದಣಿಸಿಕೊಳ್ಳಬಹುದಾಗಿದೆ. ವಿದೇಶಿ ಸಿನಿಮಾಗಳ ಪೈಕಿ ಇರಾನ್, ಕೊರಿಯನ್, ಲಂಕನ್ ಸಿನಿಮಾಗಳೂ ಸಹ ಬೆಂಗಳೂರಿನಲ್ಲಿ ತೆರೆಕಾಣಲಿವೆ.
ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳು, ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಸಂಘ, ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ
ಕಥೆಗಾರ ವಿಜಯೇಂದ್ರ ಪ್ರಸಾದ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವು ಖ್ಯಾತ ಕಲಾವಿದರು, ನಟರು, ತಂತ್ರಜ್ಞರು ಈ ಬಾರಿಯ ಫಿಲಂ ಫೆಸ್ಟ್‍ನ ಮುಖ್ಯ ಆಕರ್ಷಣೆಯಾಗಲಿದ್ದಾರೆ