Monday, February 9, 2026
Homeಟಾಪ್ ನ್ಯೂಸ್ಬೆಂಗಳೂರಿಗರ ಪರಿಸರ ಪ್ರೀತಿ ಬಗ್ಗೆ ಕನ್ನಡದಲ್ಲಿ ಮೋದಿ ಟ್ವೀಟ್

ಬೆಂಗಳೂರಿಗರ ಪರಿಸರ ಪ್ರೀತಿ ಬಗ್ಗೆ ಕನ್ನಡದಲ್ಲಿ ಮೋದಿ ಟ್ವೀಟ್

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಕಾಲಿಟ್ಟರೆ ಕನ್ನಡದಲ್ಲಿ ಒಂದೆರಡು ಮಾತನಾಡದೇ ಹೊರಡುವುದೇ ಇಲ್ಲ. ಕರ್ನಾಟಕದ ಯಾವುದೇ ವೇದಿಕೆಗಳಲ್ಲಿ ಕನ್ನಡದಲ್ಲೇ ಮಾತನ್ನು ಆರಂಭಿಸುವ ಮೋದಿ ಅವರಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನ. ಅಲ್ಲದೇ ಹಲವು ಬಾರಿ ಕನ್ನಡದಲ್ಲೇ ಟ್ವೀಟ್ ಮಾಡಿ ಜನರ ಹೃದಯ ಗೆದ್ದಿದ್ದ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭ ಕೋರಿ ಟ್ವೀಟ್ ಮಾಡಿದ್ದರು.

ಇದೀಗ ಮೋದಿ ಅವರು ಬೆಂಗಳೂರಿಗರ ಪರಿಸರ ಪ್ರೀತಿಯ ಕುರಿತಾಗಿ ಕನ್ನಡದಲ್ಲಿ ಒಂದು ಟ್ವೀಟ್ ಮಾಡಿ ಪುನಃ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ ಎಂದು ನಿಮಗೆ ತಿಳಿದಿದೆಯೇ? ಯುಗಗಳ ಹಿಂದೆ ನಗರವನ್ನು ಯೋಜಿಸಿದಾಗ, ಒಂದು ಮರವು ಅರಳುವುದನ್ನು ನಿಲ್ಲಿಸುವ ಸಂದರ್ಭದಲ್ಲಿ, ಇನ್ನೊಂದು ಮರವು ಅದರ ಸ್ಥಾನವನ್ನು ತುಂಬುವ ರೀತಿಯಲ್ಲಿ ಮರಗಳು ಇರುವಂತೆ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಪರಿಣಾಮವಾಗಿ ಬೆಂಗಳೂರಿನ ಋತುಗಳು ಹೂವಿನ ಸ್ವರಮೇಳವಾಗಿ ಹೊರಹೊಮ್ಮಿದೆ’ ಎಂದು ಪರಿಸರಪ್ರಿಯೆ, ಕಲಾವಿದೆ, ಪರಿಸರ ಕುರಿತ ವಿಚಾರಗಳ ಅಂಕಣಕಾರ್ತಿಯೂ ಆಗಿರುವ ಸುಭಾಷಿಣಿ ಚಂದ್ರಮಣಿ ಎಂಬುವರು ಟ್ವೀಟ್ ಮಾಡಿದ್ದರು.

ಬೆಂಗಳೂರಿನಲ್ಲಿ ಮಳೆಗಾಲದ ತಿಂಗಳುಗಳಲ್ಲಿಯೂ ಸಹ, ಹೂವುಗಳಿಂದ ಅಲಂಕರಿಸಲ್ಪಡುವ ಮರಗಳಿವೆ. ಕಾಲೋಚಿತವಾಗಿ ಹೂವು ಬಿಡುವ ಮರಗಳ ಹೊರತಾಗಿ, ವರ್ಷಪೂರ್ತಿ ಹೂವು ಅರಳಿರುವ ದೀರ್ಘಾವಧಿಯ ಮರಗಳಿವೆ. ಇವುಗಳು ಹೂಬಿಡುವ ಋತುವಿನಲ್ಲಿ ಸಣ್ಣ ಅಂತರವನ್ನು ತುಂಬುತ್ತವೆ. ಬೆಂಗಳೂರಿನ ಗಾಳಿಯು ಯಾವಾಗಲೂ ಪರಿಮಳಯುಕ್ತವಾಗಿರುತ್ತದೆ, ಆದ್ದರಿಂದ ಅದರ ಹೆಸರು ‘ದಿ ಗಾರ್ಡನ್ ಸಿಟಿ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದರು.

ಈ ಟ್ವೀಟ್‌ಗಳಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಇದು ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚುರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!