Sunday, January 25, 2026
Homeಟಾಪ್ ನ್ಯೂಸ್BENGALURU : ಕ್ಷುಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ - ಬೈಕ್ ಸವಾರರಿಗೆ ಬಿತ್ತು...

BENGALURU : ಕ್ಷುಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ – ಬೈಕ್ ಸವಾರರಿಗೆ ಬಿತ್ತು ಗೂಸಾ.!

ಬೆಂಗಳೂರಿನ (Bengaluru) ನಾಗವಾರ ಪಾಳ್ಯ ಮುಖ್ಯ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ (delivery Boy) ಮೇಲೆ ಇಬ್ಬರು ಯುವಕರು ಹೆಲ್ಮೆಟ್ ನಿಂದ ಮನಸ್ಸೋಇಚ್ಛೆ ಹಲ್ಲೆ (Assault) ನಡೆಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಯುವಕರಿಬ್ಬರಿಗೆ ತಕ್ಕ ಪಾಠ ಕಲಿಸಿದ್ದಾರೆ.

 

View this post on Instagram

 

A post shared by navasamaja (@navasamaja)

ಡೆಲಿವರಿ ಬಾಯ್ ಏಕಾಏಕಿ ಮುಖ್ಯ ರಸ್ತೆಗೆ ಬಂದ ಪರಿಣಾಮ ವೇಗವಾಗಿ ಬರುತ್ತಿದ್ದ ಬೈಕ್ ಸವಾರರು ನೇರವಾಗಿ ಡೆಲಿವರಿ ಬಾಯ್ ನ ವಾಹನಕ್ಕೆ ಗುದ್ದಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಬೈಕ್ ಸವಾರರು ಡೆಲಿವರಿ ಬಾಯ್ ಮೇಲೆ ಹೆಲ್ಮೆಟ್‌ನಿಂದ ಹೊಡೆದು, ಕಾಲಿನಿಂದ ಒದ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ದೃಶ್ಯ ಕಂಡ ಸ್ಥಳೀಯರು ಮಧ್ಯಪ್ರವೇಶಿಸಿ ಡೆಲಿವರಿ ಬಾಯ್ ರಕ್ಷಣೆಗೆ ಮುಂದಾದರು. ಈ ವೇಳೆ ಹಲ್ಲೆ ನಡೆಸುತ್ತಿದ್ದ ಯುವಕರಿಗೆ ಸ್ಥಳೀಯರು ನಡುರಸ್ತೆಯಲ್ಲೇ ಹಿಡಿದು ಥಳಿಸಿ ಪಾಠ ಕಲಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ನಡೆದ ವೇಳೆ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಆದರೆ, ಬೈಕ್ ನಂಬರ್ ಆಧರಿಸಿ ಗಾಯಗೊಂಡ ಯುವಕನನ್ನು ಪೊಲೀಸರು ಸಂಪರ್ಕಿಸಿದ್ದು, ಇಂದು ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಬೈಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!