Thursday, April 16, 2026
Homeಕ್ರೈಂBENGALURU CRIME : ಡ್ರೈವರ್‌ ನ್ನು ಪ್ರೀತಿಸಿ ಮದುವೆಯಾದ ಎಂಬಿಎ ವಿದ್ಯಾರ್ಥಿನಿ - ಒಂದೇ ವರ್ಷಕ್ಕೆ...

BENGALURU CRIME : ಡ್ರೈವರ್‌ ನ್ನು ಪ್ರೀತಿಸಿ ಮದುವೆಯಾದ ಎಂಬಿಎ ವಿದ್ಯಾರ್ಥಿನಿ – ಒಂದೇ ವರ್ಷಕ್ಕೆ ಅನುಮಾನಾಸ್ಪದ ಸಾವು!

ಬೆಂಗಳೂರು : ಬೆಂಗಳೂರಲ್ಲಿ(Bengaluru) ಭೀಮನ ಅಮಾವಾಸ್ಯೆ ದಿನವೆ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ (Married Women) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಮಾದನಾಯಕನಹಳ್ಳಿಯ (Madanayakanahalli) ಅಂಚೆ ಪಾಳ್ಯದಲ್ಲಿ ಶಾಕಿಂಗ್ ಘಟನೆ (Shocking incident )ನಡೆದಿದ್ದು, ಬೆಳಿಗ್ಗೆ ಗಂಡ ಅಭಿಷೇಕ್ ಗೆ ಪೂಜೆ ಮಾಡಿದ್ದ ಪತ್ನಿ ಸ್ಪಂದನಾ ನೇಣಿಗೆ ಶರಣಾಗಿದ್ದಾಳೆ.

ಅಭಿಷೇಕ್-ಸ್ಪಂದನ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.ಗಂಡನಿಗೆ ಬೆಳಿಗ್ಗೆ 10 ಗಂಟೆಗೆ ಖುಷಿಯಿಂದಲೆ ಪೂಜೆ ಮಾಡಿದ್ದಳು. ಆದ್ರೆ, 11 ಗಂಟೆಗೆ ಅಭಿಷೇಕ್ ಗೆ ಅವರ ಆಫೀಸ್ ನಲ್ಲಿದ್ದ ಯುವತಿ ಮಾಡಿದ ಅದೊಂದು ಫೋನ್ ಕರೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇದ್ರಿಂದ ಬೇಸತ್ತು ಸ್ಪಂದನಾ ನೇಣಿಗೆ ಕೊರಳೊಡ್ಡಿದ್ದಾರೆ. ರಾತ್ರಿ 12:45 ಸ್ಪಂದನಾ ತಂಗಿಗೆ ಮೆಸೇಜ್ ಮಾಡಿ ಬಳಿಕ ಮನೆಯ ಕಿಟಕಿಗೆ ನೇಣುಬಿಗಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಪಂದನಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಅಭಿಷೇಕ್​ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರ ಬಗ್ಗೆ ಸ್ಪಂದನಾ ತಂದೆಗೆ ಹಲವು ಭಾರಿ ಹೇಳಿದ್ದರು.ಯಾರಿಗೂ ಮಾಹಿತಿ ಕೊಡದೇ ತಾವೇ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಅಭಿಷೇಕ್ ಕುಟುಂಬ ಸದಸ್ಯರು ಸಾಗಿಸಿದ್ದರು ಎನ್ನಲಾಗಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮತ್ತೊಂದೆಡೆ,ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡು-ದೇವರಕೊಲ್ಲಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಗೊಣಿಕೊಪ್ಪ ಮೂಲದ ನಿಹಾದ್, ರಿಜ್ವಾನ್, ರಾಖಿಬ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನ ಮಾಹಿತಿ ತಿಳಿದು ಬರಬೇಕಾಗಿದೆ. ಮೃತರೆಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಾಗಿದ್ದಾರೆ.

ಗುರುವಾರ ಗೊಣಿಕೊಪ್ಪ ಮತ್ತು ಹುಣಸೂರುನಿಂದ ಯುವಕರ ಗುಂಪೊಂದು ಕಾರಿನಲ್ಲಿ ಮಂಗಳೂರಿನ ಉಳ್ಳಾಲಕ್ಕೆ ಬಂದಿತ್ತು. ಇಂದು ಅವರು ತಮ್ಮ ಊರಿಗೆ ತೆರಳುತ್ತಿದ್ದರು. ಈ ವೇಳೆ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಕೂಡಲೇ ಅಂಬುಲೆನ್ಸ್‌ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಬಳಿಕ ಮೃತದೇಹಗಳನ್ನು ಕೆವಿಜಿ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಇತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಶಾಕಿಂಗ್​​, ಬೆಂಗಳೂರಿನ ಈ ಹೋಟೆಲ್‌ಗಳಿಗೆ ನೋಟಿಸ್‌, ಕಬಾಬ್‌ ತಿನ್ನೋಕೂ ಮೊದ್ಲು ಹುಷಾರ್‌!

ಹೆಚ್ಚಿನ ಸುದ್ದಿ

Change Language »
error: Content is protected !!