Thursday, July 16, 2026
Homeಕ್ರೈಂCRIME : ಬ್ಯಾಡರಹಳ್ಳಿ ಕೊ*ಲೆ ಕೇಸ್ ಗೆ ಟ್ವಿಸ್ಟ್, ವರ್ಷದ ಹಿಂದೆಯೇ ಕದ್ದು ಮದುವೆಯಾಗಿದ್ರಂತೆ ...

CRIME : ಬ್ಯಾಡರಹಳ್ಳಿ ಕೊ*ಲೆ ಕೇಸ್ ಗೆ ಟ್ವಿಸ್ಟ್, ವರ್ಷದ ಹಿಂದೆಯೇ ಕದ್ದು ಮದುವೆಯಾಗಿದ್ರಂತೆ ಭವಾನಿ!

ಬೆಂಗಳೂರು : ನಗರದ ಬ್ಯಾಡರಹಳ್ಳಿಯ ತುಳಸಿನಗರದಲ್ಲಿ ನಡೆದ ಹತ್ಯೆ ಪ್ರಕರಣ ತನಿಖೆಯಲ್ಲಿ ಹಲವು ಸತ್ಯ ಬಯಲಾಗಿದೆ. ಮಾಗಡಿ ಮೂಲದ ಭವಾನಿ ಎಂಬ ಯುವತಿ ನಗರದ ಮೊಬೈಲ್ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಚಂದ್ರಶೇಖರ್ ಅಲಿಯಾಸ್ ಚಂದನ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಳು. ಅವರಿಬ್ಬರು ಯಾರಿಗೂ ತಿಳಿಸದಂತೆ ಗುಪ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಈ ಸುಂದರ ಸಂಬಂಧದ ಹಿಂದೆ ದೊಡ್ಡದೊಂದು ಮೋಸದ ಜಾಲ ಅಡಗಿತ್ತು.

ಆದ್ರೆ ಸಮಯ ಕಳೆದಂತೆ ಚಂದ್ರಶೇಖರನಿಗೆ ಈಗಾಗಲೇ ಮದುವೆಯಾಗಿ ಆರು ವರ್ಷದ ಮಗುವಿರುವ ಸತ್ಯ ಭವಾನಿಗೆ ತಡವಾಗಿ ಬೆಳಕಿಗೆ ಬಂದಾಗ ಆಕೆಯ ನಂಬಿಕೆ ಸಂಪೂರ್ಣವಾಗಿ ಭಂಗವಾಯಿತು. ಮೋಸ ಹೋದ ಯುವತಿ ಆತನಿಂದ ದೂರ ಸರಿದು, ಹೆತ್ತವರು ನಿಶ್ಚಯಿಸಿದ್ದ ಬೇರೊಂದು ಮದುವೆಗೆ ಸಮ್ಮತಿಸಿದ್ದಳು. ಈ ಬೆಳವಣಿಗೆಯಿಂದ ತೀವ್ರ ಆಕ್ರೋಶಗೊಂಡ ಚಂದ್ರಶೇಖರ್, ಆಕೆಯ ನಿವಾಸಕ್ಕೆ ಬಂದು ಜಗಳ ತೆಗೆದಿದ್ದಲ್ಲದೆ ತಾವು ಮದುವೆಯಾಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಾರ್ವಜನಿಕವಾಗಿ ರಾದ್ಧಾಂತ ಮಾಡಿದ್ದನು.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತು ಆತ್ಮಹ*ತ್ಯೆಗೆ ಯತ್ನ, ಬೆಳಗಾವಿ ಕಾಂಗ್ರೆಸ್ ನಾಯಕಿ ವಿರುದ್ಧ ದೂರು

ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ಕುಟುಂಬದವರಿಗೆ ಸತ್ಯ ತಿಳಿದು ಮನೆಯಲ್ಲಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿನ ಭರದಲ್ಲಿ ಚಂದ್ರಶೇಖರ್ ಭವಾನಿಯ ಕತ್ತು ಹಿಸುಕಿ ಜೀವ ತೆಗೆದಿದ್ದಾನೆ. ತದನಂತರ ತಾನೂ ಸಹ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ್ದಾನೆ. ಇನ್‌ಸ್ಟಾಗ್ರಾಮ್ ಚಿತ್ರಗಳನ್ನು ನೋಡಿ ಆತಂಕಗೊಂಡ ಪೋಷಕರು ಮನೆ ಮಾಲೀಕರಿಗೆ ತಿಳಿಸಿದಾಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿದ್ದು, ಪ್ರಸ್ತುತ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಹಾಗೂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!