Wednesday, November 13, 2024
Homeದೇಶಬೆಂಗಳೂರಿನ ವ್ಯಕ್ತಿಗೆ ಹೊಡೆಯಿತು ದುಬೈ ಲಾಟರಿ :ಬರೋಬ್ಬರಿ 44 ಕೋಟಿ!

ಬೆಂಗಳೂರಿನ ವ್ಯಕ್ತಿಗೆ ಹೊಡೆಯಿತು ದುಬೈ ಲಾಟರಿ :ಬರೋಬ್ಬರಿ 44 ಕೋಟಿ!

ಬೆಂಗಳೂರು: ನಗರದ ಅರುಣ್ ಕುಮಾರ್ ವಿ.ಕೆ. ಎಂಬ ವ್ಯಕ್ತಿ ರಾತ್ರಿ ಬೆಳೆಗಾಗುವವಷ್ಟರಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಬುದಾಬಿಯಲ್ಲಿ ನಡೆಯುವ ಬಿಗ್ ಟಿಕೆಟ್ ಎಂಬ ಆನ್ ಲೈನ್ ಲೈವ್ ಲಾಟರಿಯಲ್ಲಿ ಗ್ರಾಂಡ್ ಫ್ರೈಜ್ ವಿಜೇತರಾಗಿರುವ ಅರುಣ್ ಕುಮಾರ್ ಬರೋಬ್ಬರಿ 20 ದಶಲಕ್ಷ ದಿರಾಮ್ (ಸುಮಾರು 44 ಕೋಟಿ ರೂ.) ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಮ್ಮ ಗೆಳೆಯನೊಬ್ಬನ ಮೂಲಕ ಈ ಆನ್ ಲೈನ್ ಲಾಟರಿಯ ಬಗ್ಗೆ ಅರುಣ್ ಮಾಹಿತಿ ಪಡೆದಿದ್ದರು. ಬಳಿಕ ತಾವೂ ಸಹ ಅದರಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದರು. ಇವರಿಗೆ ಬಹುಮಾನ ಬಂದಿದೆಯೆಂದು ಮೊದಲು ದುಬೈನಿಂದ ಕರೆ ಬಂದಾಗ ಸ್ವತಃ ಅರುಣ್ ಅದನ್ನು ನಂಬಿರಲಿಲ್ಲವಂತೆ. ಯಾರೋ ಕುಚೋದ್ಯಕ್ಕಾಗಿ ಕರೆ ಮಾಡುತ್ತಿರಬೇಕೆಂದು ಭಾವಿಸಿ ಆ ಮೊಬೈಲ್ ನಂಬರ್‍ನ್ನು ಬ್ಲಾಕ್ ಮಾಡಿದ್ದರು. ಬಳಿಕ ಬೇರೊಂದು ನಂಬರ್‍ನಿಂದ ಕರೆ ಬಂದಾಗ ಅರುಣ್ ಗೆ ತಾವು ಕೋಟ್ಯಾಧೀಶರಾಗಿರುವುದು ಖಚಿತವಾಗಿತ್ತು.

ಹೆಚ್ಚಿನ ಸುದ್ದಿ

error: Content is protected !!